ಬೆಳ್ತಂಗಡಿ: ಸಿಎ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 28ನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ ಬೆಳ್ತಂಗಡಿ ತಾಲೂಕಿನ ಬಜಿರೆ ಗ್ರಾಮದ ದೀಪಕ್ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಆಳ್ವಾಸ್ ಕಾಲೇಜಿನ ಡೀನ್ ಪ್ರಶಾಂತ್ ಎಂ.ಡಿ. ಅವರನ್ನೂ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಮಂಜಿತ್ ಶೆಟ್ಟಿ, ಜಗನ್ನಾಥ್, ಕೀರ್ತನ್ ಪೂಂಜ ಹಾಗೂ ದೀಪಕ್ ಹೆಗ್ಡೆ ಅವರ ತಂದೆ ದಿವಾಕರ್ ಉಪಸ್ಥಿತರಿದ್ದರು.






