ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 2076ನೇ ಮದ್ಯವರ್ಜನ ಶಿಬಿರದಲ್ಲಿ ಪಾನಮುಕ್ತರಾದ ನವ ಜೀವನ ಸಮಿತಿಯ ಸದಸ್ಯರ ಪ್ರಥಮ ಮಾಸಿಕ ಸಭೆಯು ಬಂಟ್ವಾಳ ತಾಲೂಕಿನ ಶ್ರೀ ಭಯಂಕೇಶ್ವರ ದೇವಸ್ಥಾನ ನರಿಕೊಂಬು ಇಲ್ಲಿ ನಡೆಯಿತು.

ಮಾಸಿಕ ಸಭೆಯನ್ನು 2076ನೇ ಮದ್ಯವರ್ಜನ ಶಿಬಿರದ ಗೌರವಾಧ್ಯಕ್ಷರಾದ ಹರೀಂದ್ರ ಪೈ ರವರು ಉದ್ಘಾಟಿಸಿ ಹೊಸ ಜೀವನ ನಡೆಸುತ್ತಿರುವ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಸಭೆಯ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ವೇದಿಕೆ ಸಂಘಟನಾ ಅಧ್ಯಕ್ಷರಾದ ಪ್ರಕಾಶ್ ಕಾರಂತ್ ನರಿಕೊಂಬು ವಹಿಸಿದ್ದರು.

ಶ್ರೀ ಭಯಂಕೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ರಘುನಾಥ ಸೋಮಯಾಜಿ ನವಜೀವನವನ್ನು ನಡೆಸುತ್ತಿರುವ ಸದಸ್ಯರನ್ನು ಉದ್ದೇಶಿಸಿ ಮಾತನಾಡಿ ಮದ್ಯಾವರ್ಜನಾ ಶಿಬಿರಕ್ಕೆ ಸೇರಿ ವ್ಯಸನ ಮುಕ್ತ ರಾಗಿರುವುದರಿಂದ ನಿಮಗೆಲ್ಲರಿಗೂ ಪುಣ್ಯಪ್ರಾಪ್ತಿಯಾಗಿದೆ, ಪೂಜ್ಯ ವೀರೇಂದ್ರ ಹೆಗ್ಗಡೆಯವರ ಈ ಕಾರ್ಯ ಶ್ಲಾಘನೀಯ ಇಂದಿನ ಕಾರ್ಯಕ್ರಮದಲ್ಲಿ ಪಾನಮುಕ್ತರಾದ ಮನೆಯ ಮಹಿಳೆಯರು ಹೇಳಿದ ತಮ್ಮ ಭಾವನಾತ್ಮಕವಾದ ಅನುಭವಗಳನ್ನು ಆಲಿಸಿದಾಗ ನಿಜವಾಗಿಯೂ ಹೆಣ್ಮಕ್ಕಳ ಕಣ್ಣೀರನ್ನು ಒರೆಸುವ ಮತ್ತು ತಾಳಿಬಾಗ್ಯವನ್ನು ಉಳಿಸುವ, ಸಂಸಾರವನ್ನು ಸಂರಕ್ಷಿಸುವ ಕಾರ್ಯ ಧರ್ಮಸ್ಥಳದ ಯೋಜನೆ ಮಾಡುತ್ತಿದೆ ಎಂದು ಸಂತಸ ವ್ಯಕ್ತಪಡಿಸುವುದರ ಜೊತೆಗೆ ಎಲ್ಲರ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿ ಪಾನಮುಕ್ತ ಎಲ್ಲಾ ನವ ಜೀವನ ಸದಸ್ಯರಿಗೆ ದೇವರ ಸಮ್ಮುಖದಲ್ಲಿ ಕಿರುಕಾಣಿಕೆಯನ್ನು ಪ್ರಸಾದ ರೂಪವಾಗಿ ನೀಡಿದರು.

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯರವರು ಸಭೆಯಲ್ಲಿ ನವಜೀವನ ಸಮಿತಿ ಬಲವರ್ಧನೆ ಮತ್ತು ಅನು ಪಾಲನೆ, ನವಜೀವನ ಸಮಿತಿ ಸದಸ್ಯರ ವಾರದ ಸಭೆಯ ವರದಿ, ಹಾಜರಾತಿ ಕುರಿತು , ಫ್ರೀ ಕಾನ್ಫರೆನ್ಸ್ ಸಭೆ, ಶತದಿನೋತ್ಸವ ಕುರಿತು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಜಿಲ್ಲಾ ನಿರ್ದೇಶಕರಾದ ದಿನೇಶ್ ಡಿ , ಬಂಟ್ವಾಳ ತಾಲ್ಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ರೋನಾಲ್ಡ್ ಡಿ ಸೋಜಾ, ಮದ್ಯವರ್ಜನ ಶಿಬಿರದ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ, ತಾರಾನಾಥ ಹೊಳ್ಳ, ನಿವೃತ್ತ ಶಿಕ್ಷಕರಾದ ಜಯಂತ್ ನಾಯ್ಕ, ದೇವಸ್ಥಾನದ ಟ್ರಸ್ಟಿಗಳಾದ ಭುವನೇಶ, ಉಮೇಶ್ ನೆಲ್ಲಿಗುಡ್ಡೆ, ಲೋಕೇಶ್ ರವರು ಉಪಸ್ಥಿತರಿದ್ದು, ಶಿಬಿರಕ್ಕೆ ಸೇರಿ ಪಾನಮುಕ್ತರಾದ ನವ ಜೀವನ ಸಮಿತಿ ಸದಸ್ಯರು ತಮ್ಮ ಒಂದು ತಿಂಗಳ ಪಾನಮುಕ್ತ ಜೀವನದ ಅನುಭವಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಜನಜಾಗೃತಿ ಸದಸ್ಯರಾದ ಸದಾನಂದ ನಾವೂರ, ಶೇಖರ್ ಸಾಮಾನಿ, ಅಮರನಾಥ್, ಪ್ರವೀಣ್, ಚಿನ್ನಾ ಕಲ್ಲಡ್ಕ, ಜಯಚಂದ್ರ ಬೊಲ್ಮಾರ್,ಹಿರಿಯ ನವಜೀವನ ಸಮಿತಿ ಸದಸ್ಯರಾದ ಮಹಾಬಲ, ಭೋಜರಾಜ, ನಾರಾಯಣ ಶೆಟ್ಟಿ, ಅಶೋಕ, ಅಶೋಕ್ ಉಪಸ್ಥಿತರಿದ್ದರು. ಬಂಟ್ವಾಳ ಕ್ಷೇತ್ರ ಯೋಜನಾಧಿಕಾರಿ ಜಯಾನಂದ ಪಿ ಸ್ವಾಗತಿಸಿದರು, ಜನಜಾಗೃತಿ ಮೇಲ್ವಿಚಾರಕ ನಿತೇಶ್ ಕೆ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿದಿಗಳು ಸಹಕರಿಸಿದರು.






