Breaking
25 Sep 2026, Fri

ಕುಡಿದು ವಾಹನ ಚಾಲನೆ; ಪೊಲೀಸರೊಂದಿಗೆ ಯುವತಿಯ ರಂಪಾಟ

ದಾವಣಗೆರೆ: ಮದ್ಯ ಸೇವಿಸಿ ಏಕಮುಖ ರಸ್ತೆಗೆ ವಿರುದ್ಧವಾಗಿ ಕಾರು ಚಲಾಯಿಸಿದ್ದ ಯುವತಿಯೊಬ್ಬಳು, ವಾಹನ ತಡೆದ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು ರಂಪಾಟ ಮಾಡಿದ ಘಟನೆ ಗುರುವಾರ ರಾತ್ರಿ ಶಾಮನೂರು ರಸ್ತೆಯಲ್ಲಿ ನಡೆದಿದೆ.

ಮಾಹಿತಿಯ ಪ್ರಕಾರ, ಪ್ರೀತಿ ಎಂಬ ಯುವತಿ ಕಂಠಪೂರ್ತಿ ಮದ್ಯ ಸೇವಿಸಿ ಥಾರ್ ಜೀಪ್ ವಾಹನ ಚಲಾಯಿಸುತ್ತಿದ್ದಳು. ಒನ್‌ವೇ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದ ವೇಳೆ ಪೊಲೀಸರು ವಾಹನವನ್ನು ತಡೆದರು.

ಈ ವೇಳೆ ಯುವತಿ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು, ಮದ್ಯದ ನಶೆಯಲ್ಲಿ ಮಹಿಳಾ ಪಿಎಸ್‌ಐಯವರ ಮೇಲೂ ಅವಾಚ್ಯವಾಗಿ ವರ್ತಿಸಿದ್ದಾಳೆ ಎನ್ನಲಾಗಿದೆ. ಅಲ್ಲದೆ, “ನಾನು ಯಾರು ಗೊತ್ತೇನ್ರೋ, ನಿಮ್ನ ಸುಮ್ನೆ ಬಿಡಲ್ಲ” ಎಂದು ಪೊಲೀಸರನ್ನೇ ಬೆದರಿಸಿದ್ದಾಳೆ ಎಂದು ವರದಿಯಾಗಿದೆ.

ಯುವತಿ ದಾವಣಗೆರೆಯ ಪ್ರತಿಷ್ಠಿತ ವ್ಯಕ್ತಿಯ ಪುತ್ರಿ ಎಂದು ಹೇಳಲಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಸಂಬಂಧಿತ ಯುವತಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *