Breaking
6 Aug 2026, Thu

ಸಜೀಪ ಮಾಗಣೆಯಲ್ಲಿ ನೂತನ ತರವಾಡು ಮನೆ ನಿರ್ಮಾಣಕ್ಕೆ ಭೂಮಿ ಪೂಜೆ

ಸಜೀಪ ಮಾಗಣೆ ಶ್ರೀ ನಡಿ ಯೇಳು ದೈವಂಗಳು, ಶ್ರೀ ಉಳ್ಳಾಲ್ದಿ ಹಾಗೂ ಶ್ರೀ ನಾಲ್ಕೈತಾಯ ದೈವಗಳ ನೂತನ ಆರೂಡ ಮಾಡದಾರು ಗುತ್ತಿನ ನೂತನ ತರವಾಡು ಮನೆಯನ್ನು ವಾಸ್ತು ಪ್ರಕಾರ ಪುನರ್‌ನಿರ್ಮಾಣಗೊಳಿಸುವ ಹಿನ್ನೆಲೆಯಲ್ಲಿ ಶಿಲಾನ್ಯಾಸ ಹಾಗೂ ಭೂಮಿ ಪೂಜೆ ಕಾರ್ಯಕ್ರಮ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು.

ಕಾರ್ಯಕ್ರಮದ ಧಾರ್ಮಿಕ ವಿಧಿವಿಧಾನಗಳನ್ನು ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ನೆರವೇರಿಸಿದರು.

ಈ ಸಂದರ್ಭದಲ್ಲಿ ಬಿಜಂದಾರು ಗುತ್ತಿನ ಶಿವರಾಮ ಭಂಡಾರಿ, ಮಾಡದಾರು ಗುತ್ತಿನ ಗಡಿ ಪ್ರಧಾನರಾದ ಶಶಿಧರ ರೈ (ನಾರಣ ಆಳ್ವ), ಸಜೀಪ ಗುತ್ತಿನ ಗಡಿ ಪ್ರಧಾನರಾದ ಮುತ್ತಣ್ಣ ಶೆಟ್ಟಿ (ಕಾಳ ಶೆಟ್ಟಿ), ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆ. ರಾಧಾಕೃಷ್ಣ ಆಳ್ವ, ಯಶೋಧರ ರೈ, ಸತೀಶ ಶೆಟ್ಟಿ, ದೇರಾಜೆಗುತ್ತಿನ ಯಶವಂತ ಪೂಜಾರಿ, ಶಂಕರ ಪೂಜಾರಿ (ಕೋಚು ಪೂಜಾರಿ), ಕುಂಜ್ಞ ಪೂಜಾರಿ (ದಯಾನಂದ ಪೂಜಾರಿ) ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *