ಮೂಡುಬಿದಿರೆ: ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 8 ಮಂದಿ ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ಕಳೆದ ಹಲವು ವರ್ಷಗಳಿಂದ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದ ಹಾಗೂ ಅಪರಾಧ ಪತ್ತೆ ವಿಭಾಗದಲ್ಲಿ ಗಮನಾರ್ಹ ಕೆಲಸ ಮಾಡಿದ್ದ ಅಖಿಲ್ ಅಹಮದ್, ಮುಹಮ್ಮದ್ ಹುಸೈನ್ ಸೇರಿದಂತೆ ಒಟ್ಟು 8 ಮಂದಿ ಸಿಬ್ಬಂದಿಗೆ ಹೊಸ ಠಾಣೆಗಳಿಗೆ ನಿಯೋಜನೆ ನೀಡಲಾಗಿದೆ.

ಅಖಿಲ್ ಅಹಮದ್ ಅವರನ್ನು ಪಾಂಡೇಶ್ವರ ಠಾಣೆಗೆ, ಮುಹಮ್ಮದ್ ಹುಸೈನ್ ಅವರನ್ನು ಕದ್ರಿ ಠಾಣೆಗೆ, ಪ್ರದೀಪ್ ಕುಮಾರ್ ಅವರನ್ನು ಸುರತ್ಕಲ್ ಠಾಣೆಗೆ ಹಾಗೂ ಪ್ರದೀಪ್ ಕುಲಾಲ್ ಅವರನ್ನು ಮೂಲ್ಕಿ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಇನ್ನು ಅರುಣ್ ಅವರನ್ನು ಉಳ್ಳಾಲ ಠಾಣೆಗೆ, ಅಯ್ಯಪ್ಪ, ಸುರೇಶ್ ಮತ್ತು ಧರ್ಮಣ ಅವರನ್ನು ಬಜ್ಪೆ ಠಾಣೆಗೆ ವರ್ಗಾವಣೆಗೊಳಿಸಲಾಗಿದೆ.



