Breaking
15 May 2026, Fri

ಪೆಟ್ರೋಲ್, ಡೀಸೆಲ್ ದರ ಏರಿಕೆ : 4 ವರ್ಷಗಳ ಬಳಿಕ ದಾಖಲೆ ದರ ಪರಿಷ್ಕರಣೆ

ನವದೆಹಲಿ : ಸರಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ನಾಲ್ಕು ವರ್ಷಗಳ ದಾಖಲೆಯ ದರ ಪರಿಷ್ಕರಣೆ ವಿರಾಮಕ್ಕೆ ತೆರೆ ಎಳೆದು ಶುಕ್ರವಾರ (ಮೇ 15) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ ಮಾಡಿವೆ. ಪೆಟ್ರೋಲ್ ದರವನ್ನು ಲೀಟರ್‌ಗೆ 3 ರೂ. ಹೆಚ್ಚಿಸಲಾಗಿದ್ದು, ಡೀಸೆಲ್ ದರದಲ್ಲೂ ಏರಿಕೆ ಜಾರಿಯಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 94.77 ರೂ.ಗಳಿಂದ 97.77 ರೂ.ಗಳಿಗೆ ಏರಿಕೆಯಾಗಿದೆ. ಡೀಸೆಲ್ ದರವೂ ಲೀಟರ್‌ಗೆ 89.67 ರೂ.ಗಳಿಂದ 90.67 ರೂ.ಗಳಿಗೆ ಹೆಚ್ಚಳ ಕಂಡಿದೆ ಎಂದು ಕೈಗಾರಿಕಾ ಮೂಲಗಳು ತಿಳಿಸಿವೆ.

ಮಧ್ಯಪ್ರಾಚ್ಯ ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಇನ್ಪುಟ್ ವೆಚ್ಚ ಏರಿಕೆಯಾಗಿದ್ದರೂ ಸಹ ಕಳೆದ 11 ವಾರಗಳಿಂದ ತೈಲ ಕಂಪನಿಗಳು ಇಂಧನ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಮುಂದುವರಿದಿದ್ದವು. ಆದರೆ ನಿರಂತರ ನಷ್ಟದ ಕಾರಣ ಕಾರ್ಯಾಚರಣೆಗಳನ್ನು ಆರ್ಥಿಕವಾಗಿ ಸಮರ್ಥವಾಗಿ ನಡೆಸಲು ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ

Leave a Reply

Your email address will not be published. Required fields are marked *