ಹಳೆಯಂಗಡಿ: ಇಂದಿರಾ ನಗರ ರೈಲ್ವೆ ಗೇಟ್ ಸಮೀಪ ಸ್ಕೂಟರ್ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳೆಯರು ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ.

ಗಾಯಾಳುಗಳನ್ನು ಇಂದಿರಾ ನಗರದ ನಿವಾಸಿಗಳಾದ ಪ್ರತಿಭಾ ಹಾಗೂ ವಾಣಿ ಎಂದು ಗುರುತಿಸಲಾಗಿದೆ. ಅತ್ತಿಗೆ-ನಾದಿನಿಯಾದ ಇವರಿಬ್ಬರು ತಮ್ಮ ಮನೆಯಿಂದ ಮುಕ್ಕದ ಕಡೆಗೆ ಕೆಲಸಕ್ಕೆಂದು ಸ್ಕೂಟರ್ನಲ್ಲಿ ತೆರಳುತ್ತಿದ್ದರು.
ಇಂದಿರಾ ನಗರ ರೈಲ್ವೆ ಗೇಟ್ ಪಕ್ಕದ ಕಿರಿದಾದ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ವೇಗವಾಗಿ ಬಂದ ಟಿಪ್ಪರ್ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಅಪಘಾತದ ತೀವ್ರತೆಗೆ ಪ್ರತಿಭಾ ಅವರ ಕಾಲಿಗೆ ಗಂಭೀರ ಗಾಯಗಳಾಗಿದ್ದು, ವಾಣಿ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣ ಸ್ಥಳೀಯರು ನೆರವಿಗೆ ಧಾವಿಸಿ ಗಾಯಾಳುಗಳನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನಾ ಸ್ಥಳಕ್ಕೆ ಉತ್ತರ ವಿಭಾಗದ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


