Breaking
23 Dec 2024, Mon

ನಮನ ಫ್ರೆಂಡ್ಸ್ ಮುಂಬಯಿ ಇದರ 20ನೇಯ ವಾರ್ಷಿಕೋತ್ಸವ “ನಮನೋತ್ಸವ -2025′ ಇದರ ಪೂರ್ವಭಾವಿ ಸಭೆ

ಮುಂಬಯಿ:ಈ ಮುಂಬಯಿ ಮಹಾನಗರದಲ್ಲಿ ಕಳೆದ 20 ವರ್ಷಗಳಿಂದ ಸಾಮಾಜಿಕ, ಸಾಂಸ್ಕೃತಿಕವಾಗಿ ಸೇವೆಗೈಯುತ್ತಿರುವ ಪ್ರಭಾಕರ್ ಬೆಳುವಾಯಿ ಸಂಸ್ಥಾಪಕತ್ವದ ನಮನ ಫ್ರೆಂಡ್ಸ್ ಮುಂಬಯಿ ಇದರ ನಮನೋತ್ಸ 2025 ಮುಂಬರುವ ಜನವರಿ 26ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಜರಗಲಿದೆ. ಆ ಪ್ರಯುಕ್ತ ಪೂರ್ವಭಾವಿ ಸಭೆಯು ಡಿ. 12ರಂದು ಘಾಟ್ಕೋಪರ್ ಪೂರ್ವದ ಪಂತ್ ನಗರ ಕನ್ನಡ ವೆಲ್ಪರ್ ಸೊಸೈಟಿಯ ಕಿರು ಸ್ವಭಾವದಲ್ಲಿ ಜರಗಿತು.

ಈ ಸಂದರ್ಭದಲ್ಲಿ ದೀಪವನ್ನು ಪ್ರಜ್ವಲಿಸಿ, ಅಧ್ಯಕ್ಷ ಸ್ಥಾನದಿಂದ ಕನ್ನಡ ವೆಲ್ಫೇರ್ ಸೊಸೈಟಿಯ ಅಧ್ಯಕ್ಷ ನವೀನ್ ಶೆಟ್ಟಿ ಇನ್ನ ಬಾಳಿಕೆ ರವರು ಮಾತನಾಡಿ ಯಾವುದೇ ಪದಾಧಿಕಾರಿಗಳನ್ನು ಹೊಂದಿರದ ನಮನ ಫ್ರೆಂಡ್ಸ್ ಮುಂಬಯಿ ಮಿತ್ರಬಳಗದ ಮುಖಾಂತರ ಪ್ರಭಾಕರ್ ಬೆಳುವಾಯಿ ಅವರು ಸಾಮಾಜಿಕ ಹಾಗೂ ಕಲಾ ಸೇವೆಯನ್ನು ಮಾಡುತ್ತಾ ಬಂದಿರುವರು. ಕಳೆದ ಹಲವಾರು ವಾರ್ಷಿಕೋತ್ಸವವನ್ನು ಬಹಳ ಅಚ್ಚುಕಟ್ಟಾಗಿ ಅರ್ಥಪೂರ್ಣ ಸನ್ಮಾನದೊಂದಿಗೆ ಆಯೋಜಿಸುತ್ತಾ ಬಂದಿದ್ದಾರೆ. ಈ ವರ್ಷದ ನಮನೋತ್ಸವ-2025 ಕಾರ್ಯಕ್ರಮವನ್ನು ಜನವರಿ 26ರಂದು ಆಚರಿಸಲು ನಿರ್ಧರಿಸಿದ್ದಾರೆ. ಸಮಾಜ ಪರ ಹಾಗೂ ಸಂಘ ಸಂಸ್ಥೆಗಳ ಕಾರ್ಯಕ್ರಮಗಳಿಗೆ ಸಹಕರಿಸುತ್ತಾ ಬಂದಿರುವ ಪ್ರಭಾಕರ್ ಬೆಳುವಾಯಿ ಅವರಿಗೆ ನಾವೆಲ್ಲ ಪ್ರೋತ್ಸಾಹವನ್ನು ನೀಡಿ ನಮನೋತ್ಸವನ್ನು ಯಶಸ್ವಿಗೊಳಿಸೋಣ ಎಂದರು.

ನಮನೋತ್ಸವದ ಬಿತ್ತಿ ಪತ್ರವನ್ನು ಬಿಡುಗಡೆಗೊಳಿಸಿ ವಾಸ್ತು ಮಾರ್ತಾಂಡ ಪಂಡಿತ್ ನವೀನ್ ಚಂದ್ರ ಸನಿಲ್ ರವರು ಮಾತನಾಡಿ ಪ್ರಭಾಕರ್ ಬೆಳುವಾಯಿ ಮುಂಬಯಿ ಮಹಾನಗರದ ಓರ್ವ ಒಳ್ಳೆಯ ಸಂಘಟಕ ಯುವ ಬರಹಗಾರ ನಮನ ಫ್ರೆಂಡ್ಸ್ ಮುಂಬಯಿ ಸಂಸ್ಥೆಯ ಮುಖಾಂತರ ಅವರು ಸಮಾಜಮುಖಿಯಾಗಿ ನಿಸ್ವಾರ್ಥದಿಂದ ಹಲವಾರು ಕೆಲಸವನ್ನು ಮಾಡುತ್ತಿದ್ದಾರೆ. ಮುಂಬರುವ ಜನವರಿಯಲ್ಲಿ ಜರಗಲಿರುವ ನಮನೋತ್ಸವ ಇದು ನಮ್ಮೆಲ್ಲರ ಉತ್ಸವ. ಹಾಗಿರುವಾಗ ಈ ನಮನೋತ್ಸವ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗಿಯಾಗಿ ಸಹಕರಿಸಬೇಕು ಎಂದರು.ಕರ್ನಾಟಕ ಮಲ್ಲದ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿಯವರು ಮಾತನಾಡಿ ಒಳ್ಳೆಯ ಪರಿಕಲ್ಪನೆ ದೊಂದಿಗೆ ದೊಡ್ಡ ಮಟ್ಟದಲ್ಲಿ ನಮನೋತ್ಸವವನ್ನು ಆಯೋಜಿಸಲು ಪ್ರಭಾಕರ್ ಬೆಳುವಾಯಿ ನಿರ್ಧರಿಸಿದ್ದಾರೆ. ಹೆಚ್ಚಿನ ಸಂಘ ಸಂಸ್ಥೆಗಳ ಜೊತೆ ಸೇರಿ ಸಕ್ರಿಯವಾಗಿ ಸೇವೆಯನ್ನು ಸಲ್ಲಿಸುತ್ತಿರುವ ಪ್ರಭಾಕರ್ ಬೆಳುವಾಯಿ ಅವರ ನಮನೋತ್ಸವಕ್ಕೆ ಎಲ್ಲರೂ ಸಹಕರಿಸಬೇಕು. ಇದು ನಮ್ಮದೇ ಉತ್ಸವ ಎಂದು ಭಾವಿಸಿ, ಕಾರ್ಯಕ್ರಮದ ಯಶಸ್ವಿಗೆ ಕೈಜೋಡಿಸಬೇಕೆಂದರು.

ಕನ್ನಡ ಜಾನಪದ ಪರಿಷತ್ ಮಹಾರಾಷ್ಟ್ರ ಘಟಕದ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಯೆಯ್ಯಾಡಿಯವರು ಮಾತನಾಡಿ ಒಳ್ಳೆಯ ಪರಿಕಲ್ಪನೆ ಯೊಂದಿಗೆ ಪ್ರಭಾಕರ್ ಬೆಳುವಾಯಿ ಅವರ ನಮನೋತ್ಸವ ಕಾರ್ಯಕ್ರಮ ನಡೆಯಲಿದೆ. ರಾಷ್ಟ್ರ ಪ್ರೇಮ, ಮಾತೃ ಪ್ರೇಮ ,ಕಲಾ ಪ್ರೇಮ ಇದರ ಪರಿಕಲ್ಪನೆಯೊಂದಿಗೆ ನಡೆಯಲಿರುವ ನಮನೋತ್ಸವದಲ್ಲಿ ನಾವೆಲ್ಲ ಜೊತೆ ಸೇರಿಕಾರ್ಯಕ್ರಮವನ್ನು ಯಶಸ್ವಿಯಾಗುವಂತೆ ಸಹಕರಿಸೋಣ ಎಂದರು.

ವಿದ್ಯಾದಾಯಿನಿ ಸಭಾದ ಪೋರ್ಟ್ ಅಧ್ಯಕ್ಷ, ಬಿಲ್ಲವರ ಅಸೋಸಿಯೇಷನ್ ಮುಂಬಯಿ ಉಪಾಧ್ಯಕ್ಷರಾದ ಪುರುಷೋತ್ತಮ ಎಸ್ ಕೋಟ್ಯಾನ್ ರವರು ಮಾತನಾಡಿ ನಿರ್ಮಲ ಮನಸ್ಸಿನಿಂದ ಜಾತಿ ಮತ ಭೇದವಿಲ್ಲದೆ ಪ್ರಭಾಕರ್ ಬೆಳುವಾಯಿ ಸಮಾಜ ಪರ ಚಿಂತನೆಯೊಂದಿಗೆ ವಿವಿಧ ರೀತಿಯಲ್ಲಿ ಸೇವೆಯನ್ನು ಮಾಡುತ್ತಿದ್ದಾರೆ. ಅವರ ನಮನೋತ್ಸವ ಕಾರ್ಯಕ್ರಮದಲ್ಲಿ ನಾವೆಲ್ಲ ಭಾಗಿಯಾಗೋಣ ಎಂದರು.

ಫೋರ್ಟ್ ಶ್ರೀ ಭುವನೇಶ್ವರಿ ಸೇವಾ ಸಮಿತಿಯ ಅಧ್ಯಕ್ಷ, ಸಮಾಜ ಸೇವಕ ಡಾ. ಪ್ರಕಾಶ್ ಮೂಡುಬಿದಿರೆ ಅವರು ಮಾತನಾಡಿ ಬರವಣಿಗೆ ಮೂಲಕ ಅನೇಕ ಸಮಾಜ ಸೇವಕರನ್ನು ಪ್ರತಿಭಾವಂತರನ್ನು ಸಂಘ ಸಂಸ್ಥೆಗಳನ್ನು ಗುರುತಿಸುವ ಕಾರ್ಯವನ್ನು ಪ್ರಭಾಕರ್ ಬೆಳುವಾಯಿ ಮಾಡುತ್ತಾ ಬಂದಿದ್ದಾರೆ. ಅವರು ಹಮ್ಮಿಕೊಂಡ ನಮನೋತ್ಸವದಲ್ಲಿ ಎಲ್ಲರೂ ಜೊತೆ ಸೇರಿ ಸಹಕರಿಸೋಣ ಎಂದರು.

ಬಿಲ್ಲವರ ಅಸೋಸಿಯೇಷನ್ ಮುಂಬಯಿ ಅಂಧೇರಿ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಹರೀಶ್ ಶಾಂತಿ ಹೆಜಮಾಡಿಯವರು ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ನಾನು ಪ್ರಭಾಕರ್ ಬೆಳುವಾಯಿ ಅವರಸಮಾಜ ಪರ ಚಟುವಟಿಕೆಗಳನ್ನು ಗಮನಿಸುತ್ತ ಬಂದಿದ್ದೇನೆ. ಹೋಟೆಲ್ ವೃತ್ತಿಯಲ್ಲಿ ದುಡಿದು ಜೀವನ ಸಾಗಿಸುತ್ತಿರುವ ಪ್ರಭಾಕರ್ ಬೆಳುವಾಯಿ ಅವರ ಸಾಮಾಜಿಕ ಕಳಕಳಿ ತುಂಬಾ ಮೆಚ್ಚುವಂತದ್ದು. ಹೋಟೆಲ್ ದುಡಿಮೆಯ ಒತ್ತಡದ ನಡುವೆಯೂ ಅವರು ಹಲವಾರು ಸಂಘ ಸಂಸ್ಥೆಗಳ ಕಾರ್ಯಕ್ರಮಗಳಿಗೆ ಪ್ರೋತ್ಸಾಹವನ್ನು ನೀಡುತ್ತಿರುವುದು ಅಭಿನಂದನೀಯ. ಲಕ್ಷಾಂತರ ರೂಪಾಯಿ ಖರ್ಚು ವೆಚ್ಚದಲ್ಲಿ ಪ್ರಭಾಕರ್ ಬೆಳುವಾಯಿ ಅವರು ಹಮ್ಮಿಕೊಂಡಿರುವ ನಮನೋತ್ಸವ ದೈವ ದೇವರ ಅನುಗ್ರಹದಿಂದ ಯಶಸ್ವಿಯಾಗಿ ಜರಗಲಿ ಎಂದು ಹಾರೈಸಿದರು.

ಸಭಿಕರ ಪರವಾಗಿ ಗಂಗಾಧರ್ ಎಸ್ ಬಂಗೇರ, ನವೀನ್ ಪಡು ಇನ್ನ, ಉದಯ ಶೆಟ್ಟಿ ಗುರುಸ್ವಾಮಿ ವಿಕ್ರೋಲಿ, ಡಾ. ಸತೀಶ್ ಬಂಗೇರ, ಭೋಜ ಪೂಜಾರಿ ಕಲ್ಯಾಣ್, ಬಾಬು ಬೆಲ್ಚಡ, ಹರೀಶ್ ಕೋಟ್ಯಾನ್ ಪಡುಇನ್ನ, ದಿವಾಕರ್ ಇರ್ವತ್ತೂರು ಯೋಗೇಶ್ ಕೋಟ್ಯಾನ್ ಘಾಟ್ಕೋಪರ್ಮೊದಲಾದವರು ಸಂದರ್ಭೋಚಿತವಾಗಿ ಮಾತನಾಡಿ ಸಲಹೆ ಸೂಚನೆಯನ್ನು ನೀಡಿದರು. ಸಭೆಗೆ ಆಗಮಿಸಿದ ಪ್ರಮುಖ ಗಣ್ಯರಿಗೆ ಪುಷ್ಪಗುಚ್ಚವನ್ನಿತ್ತು ಗೌರವಿಸಲಾಯಿತು.ಕಾರ್ಯಕ್ರಮವನ್ನು ರಂಗನಟ, ನಿರ್ದೇಶಕ ಮನೋಹರ್ ಶೆಟ್ಟಿ ನಂದಳಿಕೆ ನಿರೂಪಿಸಿ ವಂದಿಸಿದರು.

ನಮನ ಫ್ರೆಂಡ್ಸ್ ಸಂಸ್ಥೆ ಕಳೆದ ಹಲವಾರು ವರ್ಷಗಳಿಂದ ವಿವಿಧ ರೀತಿಯಲ್ಲಿ ಸೇವೆಯನ್ನು ಗೈಯುತ್ತಾ ಬೆಳೆದಿದೆ. ಅಲ್ಲದೆ ವಾರ್ಷಿಕೋತ್ಸವವನ್ನು ಕೂಡ ಅದ್ದೂರಿಯಿಂದ ಬಹಳ ಅರ್ಥಪೂರ್ಣ ಕಾರ್ಯಕ್ರಮಗಳೊಂದಿಗೆ ಆಚರಿಸುತ್ತಾ ಬಂದಿದೆ.ಆದರೆ ಕೊರೊನಾದಿಂದಾಗಿ ಕಳೆದೆರಡು ವರ್ಷಗಳಿಂದ ವಾರ್ಷಿಕೋತ್ಸವವನ್ನು ಆಚರಿಸಲು ಸಾಧ್ಯವಾಗಿಲ್ಲ. ಈ ಬಾರಿ ಜನವರಿ 26ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಮಧ್ಯಾಹ್ನ 2 ರಿಂದ ರಾತ್ರಿ 8ರ ತನಕ ನಮನೋತ್ಸವವು ರಾಷ್ಟ್ರ ಪ್ರೇಮ ಮಾತೃಪ್ರೇಮ ಕಲಾ ಪ್ರೇಮ ಎಂಬ ಪರಿಕಲ್ಪನೆ ಯೊಂದಿಗೆ ಜರಗಲಿದ್ದು ನೃತ್ಯ ಸ್ಪರ್ಧೆ, ಬೆಂಗಳೂರು ಐಲೇಸಾ ತಂಡದವರಿಂದ ಆರ್ಕೆಸ್ಟ್ರಾ, ಬಿರುವೆರ್ ಕುಡ್ಲದ ತಂಡದ ಹುಲಿ ವೇಷ ಕುಣಿತ, ಕಾರ್ಗಿಲ್ ಯೋಧರಿಗೆ ಸನ್ಮಾನ, ಮುಂಬೈ ಸಾಧಕರಿಗೆ ಪ್ರಶಸ್ತಿ ಸನ್ಮಾನ ನಡೆಯಲಿದೆ. ಈ ದೊಡ್ಡ ಮಟ್ಟದ ನಮನೋತ್ಸವ ಕಾರ್ಯಕ್ರಮದಲ್ಲಿ ತುಳು ಕನ್ನಡಿಗರೆಲ್ಲರೂ ಭಾಗಿಯಾಗಿ ಸಹಕರಿಸಬೇಕು ಎಂದು ನಮನ ಫ್ರೆಂಡ್ಸ್ ಮುಂಬಯಿ ಸ್ಥಾಪಕ ಪ್ರಭಾಕರ್ ಬೆಳುವಾಯಿ ವಿನಂತಿಸಿದರು.

Leave a Reply

Your email address will not be published. Required fields are marked *