Breaking
23 Dec 2024, Mon

ಅಯ್ಯಪ್ಪ ಸ್ವಾಮಿ ಭಕ್ತವೃ0ದ, ಮಂಚಕಲ್ಲು, ಸಿದ್ದಕಟ್ಟೆ ಇವರ ವತಿಯಿಂದ 27ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ದೀಪಾರಾಧನೆ, ಅಪ್ಪ ಸೇವೆ ಹಾಗೂ ಕೆಂಡ ಸೇವೆ

ಸಿದ್ದಕಟ್ಟೆ: ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃ0ದ, ಮಂಚಕಲ್ಲು, ಸಿದ್ದಕಟ್ಟೆ ಇವರ ವತಿಯಿಂದ 27ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ದೀಪಾರಾಧನೆ, ಅಪ್ಪ ಸೇವೆ ಹಾಗೂ ಕೆಂಡ ಸೇವೆಯು ತಾರೀಕು 29/12/2024ನೇ ಆದಿತ್ಯವಾರ ಜರಗಲಿರುವುದು.

ಮೂಡಬಿದ್ರಿ ಶ್ರೀ ಅಯ್ಯಪ್ಪ ದೇವಸ್ಥಾನದ ಗುರುಸ್ವಾಮಿ ಸುದರ್ಶನ್ ಎಂ ರವರ ನೇತ್ರತ್ವದಲ್ಲಿ ಹಾಗೂ ಮಂಚಕಲ್ಲು ರಾಜೇಶ್ ಗುರುಸ್ವಾಮಿಯವರ ಸಹಬಾಗಿತ್ವದಲ್ಲಿ ಈ ಕಾರ್ಯಕ್ರಮವು ನಡೆಯಲಿದೆ.

ಕಾರ್ಯಕ್ರಮವು ಗಣಹೋಮ ದಿಂದ ಪ್ರಾರಂಭಗೊಂಡು ಅನ್ನಸಂತರ್ಪನೆಯೊಂದಿಗೆ ಸಂಪನ್ನಗೊಳ್ಳಲಿದೆ.ಅದೇ ದಿನ ಸುಂಕದಕಟ್ಟೆ ಮೇಳದವರಿಂದ “ಮಾಯೋದ ದೃಷ್ಟಿ” ಎಂಬ ಯಕ್ಷಗಾನ ಬಯಲಾಟವು ನಡೆಯಲಿದೆ, ಅಲ್ಲದೆ ದಿನಾಂಕ 11/01/24 ರಂದು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಇರುಮುಡಿ ಕಟ್ಟಿ ಶಬರಿಮಲೆ ಯಾತ್ರೆ ಹೊರಡಲಿದ್ದಾರೆ ಎಂದು ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃ0ದ, ಮಂಚಕಲ್ಲು ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *