ಬಂಟ್ವಾಳ : ಬಂಟ್ವಾಳ ತಾಲೂಕಿನ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ.) ಮಹಿಳಾ ಮಂಡಲ ಮಂಚಿ, ಕುಕ್ಕಾಜೆ ಇದರ 11ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ “ಗಿರಿಜಾ ರತ್ನ ಪ್ರಶಸ್ತಿ ” ಪ್ರಧಾನ ಕಾರ್ಯಕ್ರಮ ದಿನಾಂಕ 21-12-2024 ನೇ ಶನಿವಾರ ಬೆಳಿಗ್ಗೆ ಗಂಟೆ 8:00 ರಿಂದ ಮಂಚಿ ಕುಕ್ಕಾಜೆ ಮಹಿಳಾ ಮಂಡಲದ ವಠಾರದಲ್ಲಿ ಜರಗಳಿರುವುದು.
ಬೆಳಿಗ್ಗೆ ಗಂಟೆ 8 ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮ ಜರಗಲಿದ್ದು ಬೆಳಿಗ್ಗೆ ಗಂಟೆ 10:30ಕ್ಕೆ ಸಭಾ ಕಾರ್ಯಕ್ರಮ ಜರಗಲಿರುವುದು. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ವಿಧಾನಸಭಾಧ್ಯಕ್ಷರಾದ ಯು ಟಿ ಖಾದರ್ ನೆರವೇರಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ.) ಬಾಳ್ತಿಲ ಸಂಸ್ಥಾಪಕರಾದ ಶ್ರೀಮತಿ ಶೈಲಜಾ ಶೈಲಜಾ ರಾಜೇಶ್ ವಹಿಸಲಿರುವರು, ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಬಂಟ್ವಾಳ ಕ್ಷೇತ್ರ ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವರಾದ ರಾಮನಾಥ ರೈ, ಬಂಟ್ವಾಳ ತಹಸಿಲ್ದಾರ್ ಅರ್ಚನಾ ಭಟ್, ಮಹಿಳಾ ಮಂಡಳಿಯ ಹಿರಿಯ ಸಮಾಜ ಸೇವಕಿ ಭಾಗೀರಥಿ, ಮಂಚಿ ಕುಕ್ಕಾಜೆ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶಾರದಮ್ಮ, ಮೋತಿಮಾರು ಶಾಲಾ ನಿವೃತ್ತ ಶಿಕ್ಷಕಿ ದೇವಕಿ, ಬಿ ಸಿ ರೋಡ್ ನೋಟರಿ ವಕೀಲ ಅಶ್ವಿನಿ ಕುಮಾರ್ ರೈ, ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷ ಇಬ್ರಾಹಿಂ, ಬಂಟ್ವಾಳ ಮೂಡ ಅಧ್ಯಕ್ಷ ಬೇಬಿ ಕುಂದರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ತುಂಗಪ್ಪ ಬಂಗೇರ, ಶುಭ ಬಿಡಿ ಮಾಲಕ ಭುವನೇಶ್ ಪಚ್ಚಿನಡ್ಕ, ಬಿಲ್ಲವ ಸಂಘ ಇರಾ ಅಧ್ಯಕ್ಷ ಜಯರಾಮ ಪೂಜಾರಿ, ಮಾಜಿ ರಾಜ್ಯ ಧಾರ್ಮಿಕ ಪ್ರಧಾನ ಸದಸ್ಯ ಪದ್ಮನಾಭ ಕೋಟ್ಯಾನ್, ಮೂರ್ತದಾರರ ಮಹಾಮಂಡಲದ ನಿರ್ದೇಶಕರಾದ ಗಣೇಶ್ ಪೂಜಾರಿ, ಬಿ ಸಿ ರೋಡ್ ಸಾಯಿಲೀಲಾ ಹೋಟೆಲ್ ಮಾಲಕ ಸದಾನಂದ ಬಂಗೇರ, ಮೊದಲಾದವರು ಭಾಗವಹಿಸಲಿರುವರು.
ಈ ಸಂದರ್ಭದಲ್ಲಿ ಶ್ರೀಮತಿ ಡಾ. ಹೇಮಾವತಿ ಹೆಗಡೆ ಧರ್ಮಸ್ಥಳ ಹಾಗೂ ಹಿರಿಯ ಸಮಾಜ ಸೇವಕಿ ಶ್ರೀಮತಿ ಭಾಗೀರಥಿ ರವರಿಗೆ “ಗಿರಿಜಾ ರತ್ನ” ಪ್ರಶಸ್ತಿ ಪ್ರಧಾನ ಮಾಡಲಾಗುವುದು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಜೀವ ಪೂಜಾರಿ ಬಿರ್ವ , ಪದ್ಮನಾಭ ಕೋಟಿಯನ್, ಮನೋಜ್ ಕನಪಾಡಿ, ಸದಾಶಿವ ಡಿ ತುಂಬೆ, ಗಂಗಾಧರ ಆಳ್ವ ತುಂಬೆ, ಯಾಸಿರ್ ಕಲ್ಲಡ್ಕ ಇವರುಗಳನ್ನು ಸನ್ಮಾನಿಸಿ ಅಭಿನಂದಿಸನಲಾಗುವುದು
ಈ ಸಂದರ್ಭದಲ್ಲಿ ಕ್ಯಾನ್ಸರ್ ಪೀಡಿತ,ಕಿಡ್ನಿ ವೈಫಲ್ಯ ಮತ್ತು ಆಸಕ್ತರಿಗೆ ಸಹಾಯ ಹಸ್ತ ನೀಡಲಾಗುವುದು ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿರುವುದು ಎಂದು ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ.) ಬಾಳ್ತಿಲ ಸಂಸ್ಥಾಪಕರಾದ ಶ್ರೀಮತಿ ಶೈಲಜಾ ರಾಜೇಶ್ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.