ಬಂಟ್ವಾಳ: ಒಂದು ಸಮಾಜವು ಮುಂದುವರಿಯಬೇಕಾದರೆ ಕೇವಲ ಪುರುಷರಿಂದ ಸಾಧ್ಯವಾಗಲಾರದು ಮಹಿಳೆಯರಿಗೂ ಸಮಾನ ಅವಕಾಶ ನೀಡಿ ದೇಶದ ಅಭಿವೃದ್ಧಿಯಲ್ಲಿ ಸಮಾನತೆಯನ್ನು ಕಾಯ್ದುಕೊಳ್ಳಬೇಕಾಗಿದೆ ಎಂದು ವಿಧಾನಸಭಾಧ್ಯಕ್ಷರಾದ ಯು ಟಿ ಖಾದರ್ ಹೇಳಿದರು.
ಅವರು ಶನಿವಾರ ಬಂಟ್ವಾಳ ತಾಲೂಕಿನ ಮಂಚಿ ಕುಕ್ಕಾಜೆ ಮಹಿಳಾ ಮಂಡಲದ ವಠಾರದಲ್ಲಿ ಜರಗಿದ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ.) ಮಹಿಳಾ ಮಂಡಲ ಮಂಚಿ, ಕುಕ್ಕಾಜೆ ಇದರ 11ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ “ಗಿರಿಜಾ ರತ್ನ ಪ್ರಶಸ್ತಿ ” ಪ್ರಧಾನ, ಹಾಗೂ ಸಾಧಕರ ಅಭಿನಂದನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.70 ವರ್ಷಗಳ ಹಿಂದೆ ಸ್ಥಾಪನೆಗೊಂಡ ಮಹಿಳಾ ಸಂಘಟನೆಯು ಮಹಿಳೆಯರ ಅಭಿವೃದ್ಧಿ ಕೆಲಸಗಳಿಗೆ ತೊಡಗಿಸಿಕೊಂಡು ವಿದ್ಯಾರ್ಥಿಗಳಿಗೆ,ಯುವಕರಿಗೆ ಯುವತಿಯರಿಗೆ ಹಲವು ವಿಚಾರಗಳಿಗೆ ಮಾದರಿಯಾಗಿ ರೂಪುಗೊಂಡಿದ್ದು ಅಭಿನಂದನಾದಾಯಕವಾಗಿದೆ. ಶೇಕಡ 50ರಷ್ಟು ಮಹಿಳೆಯರು ಆದರೂ ಮುಖ್ಯ ವಾಹಿನಿಗೆ ಬಂದು ಸಮಾಜದ ಜೊತೆ ಬೆರೆದು ಸರಕಾರ ಮತ್ತು ಸಮಾಜದ ನಡುವಿನ ಕೊಂಡಿಯಾಗಿ ಮಹಿಳಾ ಸಬಲೀಕರಣಕ್ಕೆ ಜೊತೆಯಾಗಬೇಕು,ಆರ್ಥಿಕತೆಯಿಂದ ಹಿಂದುಳಿದ ಹಲವು ಕುಟುಂಬಗಳ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವಾಗುವಲ್ಲಿ ಸಂಸ್ಥೆಯು ಅಧ್ಯಕ್ಷರ ಜೊತೆ ಸರ್ವ ಸದಸ್ಯರು ಒಗ್ಗಟ್ಟಾಗಿ ಸೇರಿ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು, ಸರಕಾರದ ವಿವಿಧ ಯೋಜನೆಗಳನ್ನು ಮನೆಮನೆಗಳಿಗೆ ತಲುಪಿಸುವ ವಾತ್ಸಲ್ಯಮಯಿ ಸಂಸ್ಥೆಯು ಸಮಾಜದ ನೊಂದ ಹೆಣ್ಣು ಮಕ್ಕಳ ಕಣ್ಣೀರು ಒರೆಸುವ ಕೆಲಸ ಶ್ಲಾಘನೀಯ. ನ್ಯಾಯವಾದಿಯಾಗಿ, ವಾಗ್ಮಿಯಾಗಿ ಕ್ರೀಡೆ ಸಾಂಸ್ಕೃತಿಕ, ಕ್ಷೇತ್ರದಲ್ಲೂ ತೊಡಗಿಸಿಕೊಂಡ ಈ ಸಂಸ್ಥೆ ಯ ಸ್ಥಾಪಕ ರಾದ ಶೈಲಜಾ ಇವರ ಪ್ರತಿಭೆಯಿಂದ ಇನ್ನಷ್ಟು ಮಹಿಳೆಯರು ಬೆಳೆದು ಬರಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ.) ಬಾಳ್ತಿಲ ಸಂಸ್ಥಾಪಕರಾದ ಶ್ರೀಮತಿ ಶೈಲಜಾ ಶೈಲಜಾ ರಾಜೇಶ್ ವಹಿಸಿದ್ದರು ಮಹಿಳಾ ಮಂಡಳಿಯ ಹಿರಿಯ ಸಮಾಜ ಸೇವಕಿ ಶ್ರೀಮತಿ ಭಾಗೀರಥಿ ಕಾರ್ಯಕ್ರಮ ಉದ್ಘಾಟಿಸಿ, ಮಂಚಿ ಕುಕ್ಕಾಜೆ ಮಹಿಳಾ ಮಂಡಳಿ ಸಂಘವನ್ನು ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ.) ಬಾಳ್ತಿಲ ಜೊತೆ ವಿಲೀನಗಳಿಸಿ ಸಂಘದ ಕೀ ಹಾಗೂ ನಡವಳಿ ಪುಸ್ತಕದ ಜೊತೆ ಅಧಿಕಾರ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಕಿ ಶ್ರೀಮತಿ ಭಾಗೀರಥಿ ರವರಿಗೆ ರಾಜ್ಯ ಮಟ್ಟದ “ಗಿರಿಜಾ ರತ್ನ” ಪ್ರಶಸ್ತಿ ಪ್ರದಾನ ಮಾಡಲಾಯಿತು . ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಜೀವ ಪೂಜಾರಿ ಬಿರ್ವ , ಪದ್ಮನಾಭ ಕೋಟಿಯನ್, ಮನೋಜ್ ಕನಪಾಡಿ, ಸದಾಶಿವ ಡಿ ತುಂಬೆ, ಗಂಗಾಧರ ಆಳ್ವ ತುಂಬೆ, ಯಾಸಿರ್ ಕಲ್ಲಡ್ಕ ಇವರುಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಕ್ಯಾನ್ಸರ್ ಪೀಡಿತ,ಕಿಡ್ನಿ ವೈಫಲ್ಯ ಮತ್ತು ಆಸಕ್ತರಿಗೆ ಸಹಾಯ ಹಸ್ತ ಗಣ್ಯರ ಸಮ್ಮುಖದಲ್ಲಿ ನೀಡಲಾಯಿತು.ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ.) ಬಾಳ್ತಿಲ ವತಿಯಿಂದ ಸನ್ಮಾನ್ಯ ಯು ಟಿ ಖಾದರ್ ರವರನ್ನು ಗೌರವಿಸಲಾಯಿತು ಮಂಚಿ ಕುಕ್ಕಾಜೆ ಮಹಿಳಾ ಮಂಡಳಿಯ ಸದಸ್ಯರ ವತಿಯಿಂದ ಶ್ರೀಮತಿ ಶೈಲಜಾ ರಾಜೇಶ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಮಾಜಿ ಉಸ್ತುವಾರಿ ಮಂತ್ರಿ ಶ್ರೀಯುತ ರಮಾನಾಥ ರೈ, ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷ ಇಬ್ರಾಹಿಂ, ಬಂಟ್ವಾಳ ಮೂಡ ಅಧ್ಯಕ್ಷ ಬೇಬಿ ಕುಂದರ್, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ತುಂಗಪ್ಪ ಬಂಗೇರ, ಬಿಲ್ಲವ ಸಂಘ ಇರಾ ಅಧ್ಯಕ್ಷ ಜಯರಾಮ ಪೂಜಾರಿ, ಮಾಜಿ ರಾಜ್ಯ ಧಾರ್ಮಿಕ ಪ್ರಧಾನ ಸದಸ್ಯ ಪದ್ಮನಾಭ ಕೋಟ್ಯಾನ್, ಮೂರ್ತದಾರರ ಮಹಾಮಂಡಲದ ನಿರ್ದೇಶಕರಾದ ಗಣೇಶ್ ಪೂಜಾರಿ, ಬಿ ಸಿ ರೋಡ್ ಸಾಯಿಲೀಲಾ ಹೋಟೆಲ್ ಮಾಲಕ ಸದಾನಂದ ಬಂಗೇರ, ಸಜೀಪ ಮೂಢ ಗ್ರಾಮ ಪಂಚಾಯತ್ ಅಧ್ಯಕ್ಷ ಶೋಭಾ ಶೆಟ್ಟಿ,ಕೊಲ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಯಂತಿ, ಮೋತಿಮಾರು ಮಹಿಳಾ ಮಂಡಲ ಅಧ್ಯಕ್ಷ ಜ್ಯೋತಿ ಪ್ರಭು, ತುಳಸಿ, ಮಂಚಿ ಕುಕ್ಕಾಜೆ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶಾರದಮ್ಮ, ಮೋತಿಮಾರು ಶಾಲಾ ನಿವೃತ್ತ ಶಿಕ್ಷಕಿ ದೇವಕಿ, ಮೊದಲದವರು ಉಪಸ್ಥಿತರಿದ್ದರು.
ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿ ಗಿತು ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ (ರಿ.) ಬಾಳ್ತಿಲ ಸಂಸ್ಥಾಪಕರಾದ ಶ್ರೀಮತಿ ಶೈಲಜಾ ರಾಜೇಶ್ ಪ್ರಸ್ತಾವಿಕದೊಂದಿಗೆ ಸ್ವಾಗತಿಸಿ, ದಿನೇಶ್ ಸುವರ್ಣ ರಾಯೀ ಕಾರ್ಯಕ್ರಮ ನಿರೂಪಿಸಿದರು.