ವಿಟ್ಲ: ಪಿ.ಎಂ ಶ್ರೀ ಸರಕಾರಿ ಫ್ರೌಢ ಶಾಲೆ(ಆರ್ ಎಂ ಎಸ್ ಎ)ಯಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಶಾಲಾ ವಾರ್ಷಿಕೋತ್ಸವ ಸಂಭ್ರಮ ನಡೆಯಿತು. ವಿಟ್ಲ ಶ್ರೀ ಯೋಗೀಶ್ವರ ಗೋರಕ್ಷನಾಥ ಮಠದ ರಾಜಗುರು ಶ್ರದ್ಧಾನಾಥಾಜೀ ಮಹಾರಾಜ್ ಆಶೀರ್ವಚನ ನೀಡಿದರು.
ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ನಡೆಯಿತು. ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕರುಣಾಕರ ಕುಲಾಲ್, ವಿಟ್ಲ ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಸಂಗೀತಾ ಪಾಣೆಮಜಲು, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ರಜತ್ ಆಳ್ವ, ಪ್ರೌಢಶಾಲಾ ವಿಭಾಗದ ಎಸ್ ಡಿ ಎಂ ಸಿ ಅಧ್ಯಕ್ಷೆ ರಶ್ಮಿ ಹರೀಶ್, ಪ್ರಾಥಮಿಕ ವಿಭಾಗದ ಎಸ್ ಡಿಎಂಸಿ ಅಧ್ಯಕ್ಷ ರವಿಶಂಕರ್ ಶಾಸ್ತ್ರಿ, ನಿವೃತ್ತ ಶಿಕ್ಷಕಿ ಪ್ರೇಮಲತಾ, , ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಕೆ. ಉಪಸ್ಥಿತರಿದ್ದರು.
ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಫೆಲ್ಸಿಟಾ ಈವಾ ಗಲ್ಬಾವೊ ಸ್ವಾಗತಿಸಿದರು. ಸಹ ಶಿಕ್ಷಕ ಜಗದೀಶ್ ವಂದಿಸಿದರು. ಸಹ ಶಿಕ್ಷಕಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.