Breaking
21 Jun 2026, Sun

46ನೇ ರಾಷ್ಟ್ರೀಯ ಹಿರಿಯರ ಕ್ರೀಡಾಕೂಟ: ಬಂಟ್ವಾಳದ ಗ್ಲೇಡಿಸ್ ಪಾಯ್ಸ್‌ಗೆ ಚಿನ್ನ–ಬೆಳ್ಳಿ ಪದಕ

ಬಂಟ್ವಾಳ: ಕೇರಳದ ತ್ರಿವೇಂಡ್ರಮಿನಲ್ಲಿ ನಡೆದ 46ನೇ ರಾಷ್ಟ್ರೀಯ ಹಿರಿಯರ ಕ್ರೀಡಾಕೂಟದಲ್ಲಿ ಬಂಟ್ವಾಳದ ಹಿರಿಯ ಕ್ರೀಡಾಪಟು ಗ್ಲೇಡಿಸ್ ಪಾಯ್ಸ್ ಅವರು ಚಿನ್ನ ಹಾಗೂ ಬೆಳ್ಳಿಯ ಪದಕಗಳನ್ನು ಪಡೆದುಕೊಂಡಿದ್ದಾರೆ.

ಜ. 28 ರಿಂದ ಫೆ. 1ರ ವರೆಗೆ ನಡೆದ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಗ್ಲೇಡಿಸ್ ಪಾಯ್ಸ್ ಅವರು ತ್ರಿವಿಧ ಜಿಗಿತ, 200 ಮೀ ಹರ್ಡಲ್ಸ್, 400 ಮೀ ರಿಲೇ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ 400 ಮೀ ಓಟದಲ್ಲಿ ಬೆಳ್ಳಿಯ ಪದಕಗಳನ್ನು ಗೆದ್ದು ಬಂಟ್ವಾಳ ತಾಲೂಕು ಹಾಗೂ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ.

ಇದಲ್ಲದೇ ಇವರು ಜುಲೈ ತಿಂಗಳಲ್ಲಿ ಸೌತ್ ಕೊರಿಯಾದಲ್ಲಿ ನಡೆಯುವ ವರ್ಲ್ಡ್ ನೀತಿಗೆ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *