Breaking
21 Jun 2026, Sun

ಭವಿಷ್ಯದ ವಿಕಸಿತ ಭಾರತಕ್ಕೆ ಪೂರಕವಾದ ಕೇಂದ್ರ ಬಜೆಟ್: ಪ್ರಭಾಕರ ಪ್ರಭು

ಬಂಟ್ವಾಳ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2026-27ನೇ ಸಾಲಿನ ಕೇಂದ್ರ ಬಜೆಟ್ ಬಗ್ಗೆ ಪ್ರಭಾಕರ ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಜೆಟ್‌ ನಲ್ಲಿ ಕರಾವಳಿಯ ಕೋಕೋ, ತೆಂಗು, ಗೇರು ಬೆಳೆಗೆ ಪ್ರೋತ್ಸಾಹದೊಂದಿಗೆ ರಪ್ತಿಗೆ ಆಧ್ಯತೆಯನ್ನು ನೀಡಲಾಗಿದೆ.

ಪಶುಪಾಲನೆಗೆ ಸಹಾಯಧನದೊಂದಿಗೆ ಸುಲಭ ಸಾಲ, ರೈತರಿಗಾಗಿ ಎ ಒನ್ ತಂತ್ರಜ್ಞಾನ ಬಳಕೆ, ಖಾದಿ ಗ್ರಾಮೋದ್ಯೋಗಕ್ಕೆ ಪ್ರೋತ್ಸಾಹ, ಹೈಸ್ಪೀಡ್ ರೈಲು ಯೋಜನೆ, ಸೆಮಿಕಂಡಕ್ಟರ್ ಉತ್ಪಾದನೆಗೆ ಪ್ರೋತ್ಸಾಹ, ಆಯುರ್ವೇದ ಔಷಧಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಿಗಳಿಗೆ ಸಾಲ ನೆರವು ಹಾಗೂ ಪ್ರತಿ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯರಿಗೆ ಒಂದು ಮಹಿಳಾ ಹಾಸ್ಟೆಲ್ ಸ್ಥಾಪನೆ ಎಲ್ಲಾ ಕ್ಷೇತ್ರಕ್ಕೂ ಆದ್ಯತೆಯಿಂದ ಕೂಡಿದ ವಿಕಸಿತ ಭಾರತಕ್ಕೆ ಪೂರಕವಾಗಿದ್ದು, ವಿಕಸಿತ ಭಾರತದ ಭವಿಷ್ಯಕ್ಕೆ ದಾರಿದೀಪವಾಗಿದೆ ಎಂದು ಪ್ರಭಾಕರ ಪ್ರಭು ಹೇಳಿದ್ದಾರೆ.

Leave a Reply

Your email address will not be published. Required fields are marked *