ಬಂಟ್ವಾಳ : ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಪಾಣೆಮಂಗಳೂರು ಸರ್ವೀಸ್ ರಸ್ತೆಯಲ್ಲಿ ನಡೆದಿದೆ.
ಗಾಯಗೊಂಡವರನ್ನು ನರಿಕೊಂಬು ನಿವಾಸಿ ಮುಸ್ತಫಾ ಎಂದು ತಿಳಿದುಬಂದಿದೆ.

ಮುಸ್ತಫಾ ಅವರು ನರಿಕೊಂಬು ರಸ್ತೆಯಿಂದ ಅಂಡರ್ ಪಾಸ್ ನ ಮೂಲಕ ಪಾಣೆಮಂಗಳೂರು ರಸ್ತೆಯನ್ನು ದಾಟುವ ವೇಳೆ ಮೆಲ್ಕಾರ್ ಕಡೆಯಿಂದ ಬರುತ್ತಿದ್ದ ಸ್ವಿಫ್ಟ್ ಕಾರು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ರಸ್ತೆಗೆ ಎಸೆಯಲ್ಪಟ್ಟಿದ್ದು ತಲೆಗೆ ಗಂಭೀರ ಗಾಯಗಳಾಗಿದೆ.
ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ತಿಳಿದು ಬಂದಿದೆ.





