ಧರ್ಮಸ್ಥಳ : ಕಾನೂನು ನೆರವು ಸಮಿತಿ ಮತ್ತು ಉಜಿರೆ ಬೆಳಾಲು ‘ಶೌರ್ಯ’ ವಿಪತ್ತು ನಿರ್ವಹಣೆ ಘಟಕದ ವತಿಯಿಂದ ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಟ್ರಾಫಿಕ್ ನಿಯಮ ಹಾಗೂ ಸುರಕ್ಷಿತ ಚಾಲನೆ ಮತ್ತು ಸೈಬರ್ ವಂಚನೆ, ಮಾದಕವಸ್ತು ಮುಕ್ತ ಸಮಾಜ ಕುರಿತು ಜಾಗೃತಿ ಕಾರ್ಯಕ್ರಮವು ಫೆ.2 ರಂದು ನಡೆಯಿತು.

ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕಿಶೋರ್ ಪಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಂಚಾರ ಪೊಲೀಸ್ ಸಿಬ್ಬಂದಿ ಅಭಿಜಿತ್, ಬೆಳ್ತಂಗಡಿ ಶೌರ್ಯ ವಿಪತ್ತು ನಿರ್ವಹಣೆ ಘಟಕದ ಮಾಸ್ಟರ್ ಅವಿನಾಶ್ ಭಿಡೆ , ಊರಿನ ಆಟೊ ಚಾಲಕರು ಮತ್ತು ವಾಹನ ಮಾಲಕರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯ ಜಯರಾಮ ಮಯ್ಯ ಸ್ವಾಗತಿಸಿದರು. ಶೌರ್ಯ ತುರ್ತು ಸ್ಪಂದನಾ ಘಟಕದ ಸಂಯೋಜಕ ಸುಲೈಮಾನ್ ಭೀಮಂಡೆ ಕಾರ್ಯಕ್ರಮ ನಿರ್ವಹಿಸಿದರು.








