Breaking
23 Dec 2024, Mon

ನ್ಯೂ ವೈಬ್ರೆಂಟ್ ಪಿ ಯು ಕಾಲೇಜು ಮೂಡುಬಿದ್ರೆ : ವಾರ್ಷಿಕೋತ್ಸವ ಸಂಭ್ರಮ

ಮೂಡಬಿದ್ರಿ: ಶಿಕ್ಷಣ ಕ್ಷೇತ್ರದಲ್ಲಿ ಐತಿಹಾಸಿಕ ದಾಖಲೆಯನ್ನು ಮಾಡಿರುವ ಮೂಡಬಿದಿರೆಯ ನ್ಯೂ ವೈಬ್ರೆಂಟ್ ಪಿ ಯು ಕಾಲೇಜಿನ ವಾರ್ಷಿಕೋತ್ಸವ ಸಂಭ್ರಮವು ದಿನಾಂಕ 14-12-2024ರ ಶನಿವಾರದಂದು ಮೂಡುಬಿದಿರೆಯ ಪಡುಮಾರ್ನಾಡಿನ ಜಿ.ಕೆ ಗಾರ್ಡನ್ ಸಭಾಂಗಣದಲ್ಲಿ ನಡೆಯಿತು.

ವಿಜ್ಞಾನ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಯನ್ನು ಮಾಡಿರುವ NITK ಪುದುಚೇರಿಯ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಅಮೃತ್ ಭೀಡೆರವರಿಗೆ 2024-25 ನೇ ಸಾಲಿನ ‘ವೈಬ್ರೆಂಟ್ ವಿಜ್ಞಾನ ರತ್ನ -2024’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.”

ಶ್ರೀಯುತರು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮೌಲ್ಯಧಾರಿತ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳು ಮನಸ್ಸಿನ ಒತ್ತಡ ನೀವಾರಿಸುವಲ್ಲಿ ಸಹಕಾರಿಯಗಬಲ್ಲದು. ಕೇವಲ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಸಾಧನೆಯ ಕ್ಷೇತ್ರ ಮಾತ್ರವಲ್ಲ. ಶಿಕ್ಷಕ ವೃತ್ತಿಯಲ್ಲೂ ಸಾಧನೆಯನ್ನು ಮಾಡಿ, ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡಿದಾಗ ಸಾರ್ಥಕ ಬದುಕು ಸಾಧ್ಯವಾಗುತ್ತದೆ. ” ಎಂಬ ಸಂದೇಶವನ್ನು ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅದಾನಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಶ್ರೀಯತ ಕಿಶೋರ್ ಆಳ್ವ ರವರು ” ಮೌಲ್ಯಗಳನ್ನು ಕಲಿಯುವುದರ ಜೊತೆಗೆ ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಜೀವನ ಸಾಧನೆಯ ಪಥದತ್ತ ಸಾಗಲು ಸಾಧ್ಯ ” ಎಂಬ ಮಾಹಿತಿಯನ್ನು ನೀಡಿದರು.

” ಇಂದು ಒಬ್ಬ ಸಾಮಾನ್ಯ ವಿದ್ಯಾರ್ಥಿಯು ವೈದ್ಯಕೀಯ ಸೀಟು ಗಳಿಸಲು ಹಲವು ನಾಯಕರುಗಳು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲು ಉತ್ತೇಜಸಿರುವುದೇ ಇದಕ್ಕೆ ಮೂಲ ಕಾರಣ”ವೆಂದು ಕರ್ನಾಟಕ ರಾಜ್ಯ ಮಾಜಿ ಶಾಸಕರಾಗಿದ್ದ ಶ್ರೀಯುತ ಅಭಯಚಂದ್ರ ಜೈನ್ ರವರು ನುಡಿದರು.

ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿರುವಂತಹ ಶ್ರೀಯತ ಸಿ.ಡಿ.ಜಯಣ್ಣ ರವರು ” ಶಿಕ್ಷಣ ಕ್ಷೇತ್ರಕ್ಕೆ ಹಲವು ದಾಖಲೆಗಳನ್ನು ನೀಡಿ, ಸುವರ್ಣಾಕ್ಷರಗಳಲ್ಲಿ ಐತಿಹಾಸಿಕ ದಾಖಲೆಯನ್ನು ಮಾಡಿರುವ ಸಂಸ್ಥೆ,ನ್ಯೂ ವೈಬ್ರೆಂಟ್ ಕಾಲೇಜು, ರಾಷ್ಟದ ಇತರೆ ಸಂಸ್ಥೆಗಳಿಗೆ ಮಾದರಿಯಾಗಲಿ ” ಎಂದರು.

ಸಂಸ್ಥೆಯ ಹಿತೈಷಿಯಾಗಿರುವ ಮತ್ತು ಉದ್ಯಮಿಯು ಆಗಿರುವಂತಹ ಶ್ರೀಯುತ ಶ್ರೀಪತಿ ಭಟ್ ರವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕಾಲೇಜಿನ ಪ್ರಾಂಶುಪಾಲರು ಮತ್ತು ಟ್ರಷ್ಟಿ ಯು ಆಗಿರುವಂತಹ ಡಾ. ವೆಂಕಟೇಶ್ ನಾಯಕ್ ರವರು ವಾರ್ಷಿಕ ವರದಿಯನ್ನು ವಾಚಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಟ್ರಸ್ಟಿಯು ಆಗಿರುವಂತಹ ಶ್ರೀಯತ ಸುಭಾಶ್ ಝ ರವರು “ವಿದ್ಯಾರ್ಥಿಗಳ ಜೀವನವನ್ನು ಉತ್ತಮ ರೀತಿಯಲ್ಲಿ ರೂಪಿಸುವುದೇ ನಮ್ಮ ಸಂಸ್ಥೆಯ ಮೂಲ ಉದ್ದೇಶವೆಂದು ” ತಿಳಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.ಕಾರ್ಯಕ್ರಮದಲ್ಲಿ ಕಾಲೇಜು ಟ್ರಷ್ಟಿಗಳಾಗಿರುವಂತಹ ಸುಭಾಶ್ ಝ, ಡಾ. ವೆಂಕಟೇಶ್ ನಾಯಕ್, ಚಂದ್ರಶೇಖರ್ ರಾಜೇ ಅರಸ್,ಶರತ್ ಗೋರೆ, ಮಹಮ್ಮದ್ ಭಾಷಾ, ಯೋಗೇಶ್ ಬೆಡೇಕರ್ ಮತ್ತು ಅಮರೇಶ್ ರವರು ಉಪಸ್ಥಿತರಿದ್ದರು. ಉಪನ್ಯಾಸಕಿ ಶ್ರೀಮತಿ ರಾಗಿಣಿಯವರು ಕಾರ್ಯಕ್ರಮಕ್ಕೆ ಆಗಮಿಸಿರುವ ಅತಿಥಿಗಳನ್ನು ಸ್ವಾಗತಿಸಿದರು.ಉಪ ಪ್ರಾಂಶುಪಾಲರಾಗಿರುವಂತಹ ಡಾ. ರಶ್ಮಿ ರಾಜೇ ಅರಸ್ ರವರು ವಂದನಾರ್ಪಣೆಯನ್ನು ನೆರವೇರಿಸಿದರು. ಉಪನ್ಯಾಸಕರಾಗಿರವಂತಹ ಹರೀಶ್ ನಂಬಿಯರ್ ಮತ್ತು ವರ್ಷ ಕಾಮತ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Leave a Reply

Your email address will not be published. Required fields are marked *