Breaking
23 Dec 2024, Mon

ಅಶೋಕ್ ನಾಯ್ಕ್ ಕಳಸ ಬೈಲು ಇವರಿಗೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ

ಮೂಡಬಿದ್ರೆ ಕುಣಿತ ಭಜನಾ ಗುರುಗಳಾದ ಅಶೋಕ್ ನಾಯ್ಕ್ ಕಳಸಬೈಲು ಇವರಿಗೆ ನವೆಂಬರ್ 29 2024 ತಾರೀಖಿನಂದು ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ಕಲಾಭೂಮಿ ಪ್ರತಿಷ್ಠಾನದಿಂದ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಭಜನಾ ಗುರುಗಳಾದ ಅಶೋಕ್ ನಾಯ್ಕ್ ಇವರ ಕುಣಿತಭಜನೆ, ಸಂಗೀತ, ಕ್ರೀಡೆ ಪರಿಸರ ಮತ್ತು ನೃತ್ಯ ಕ್ಷೇತ್ರವನ್ನು ಗುರುತಿಸಿ
ಕನ್ನಡಪರ ಹೋರಾಟಗಾರರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರೂ ಆದಂತಹ ಶ್ರೀ ಸಾ.ರಾ ಗೋವಿಂದರವರು, ವಾಣಿಜ್ಯ ಮಂಡಳಿಯ ಗೌರವ ಕಾರ್ಯದರ್ಶಿಗಳಾದ ಸುಂದರ್ ರಾಜ್, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷರಾದ ಬಿ.ಎನ್ ಜಗದೀಶ್, ಅಂಬೇಡ್ಕರ್ ಸೇನೆಯ ಅಧ್ಯಕ್ಷರಾದ ಪಿ. ಮೂರ್ತಿ, ಕನ್ನಡವೇ ಸತ್ಯ ರಂಗಣ್ಣ, ನಿರ್ಮಾಪಕರಾದ ಕಿರಣ್ ತೋಟಂಬೈಲು, ಚೇತನ್ ರಾಜ್, ಹಿರಿಯ ನಟರಾದ ಶಂಕರ್ ಭಟ್, ಪ್ರಣಯ ಮೂರ್ತಿ, ಹಿರಿಯ ಸಾಹಿತಿಗಳಾದ ಬೆ.ಗೋ ರಮೇಶ್, ಕಲಾಭೂಮಿ‌ ಪ್ರತಿಷ್ಠಾನದ ಅಧ್ಯಕ್ಷರಾದ ಆಸ್ಕರ್ ಕೃಷ್ಣ, ಸಂಚಾಲಕರಾದ ನಿಂಗರಾಜ್ ಮತ್ತು ರಕ್ತದಾನಿ ಮಂಜು ಇವರ ಸಮ್ಮುಖದಲ್ಲಿ ಅಶೋಕ್ ನಾಯ್ಕ್ ಕಳಸಬೈಲು ಇವರಿಗೆ ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.


ಮುಂದಿನ ದಿನಗಳಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ನಿಮ್ಮಿಂದಾಗಲಿ ಎಂದು ಎಂದು ಕಲಾಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾದ ಆಸ್ಕರ್ ಕೃಷ್ಣ ತಿಳಿಸಿದರು

Leave a Reply

Your email address will not be published. Required fields are marked *