ಮುಂಬಯಿ, ಡಿ.10 ನಮನ ಫ್ರೆಂಡ್ಸ್ ಮುಂಬಯಿ ಇದರ 20ನೇ ವಾರ್ಷಿಕೋತ್ಸವ ನಮನೋತ್ಸವ- 2025
ಸಮಾರಂಭವು ಜನವರಿ 26 ರ ರವಿವಾರದಂದು ಕುರ್ಲಾ ಪೂರ್ವದ ಬಂಟರ ಭವನ ಸಭಾಗೃಹದಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಆ ಪ್ರಯುಕ್ತ ರಾಷ್ಟ್ರಪ್ರೇಮ, ಮಾತೃಪ್ರೇಮ, ಕಲಾಪ್ರೇಮ ಪರಿಕಲ್ಪನೆಯನ್ನು ಒಳಗೊಂಡ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ಯನ್ನು ಆಯೋಜಿಸಿದ್ದು, ಆರ್ಹ ತಂಡಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ತಂಡಗಳು ಜ 5 ರೊಳಗೆ ತಮ್ಮ ತಂಡದ ಹೆಸರನ್ನು ನೋಂದಾಯಿಸಿಕೊಳ್ಳತಕ್ಕದ್ದು. ಪ್ರತೀ ತಂಡದಲ್ಲಿ ಕನಿಷ್ಠ 8 ನೃತ್ಯಗಾರರಿರಬೇಕು. ಕನ್ನಡ ತುಳು ಭಾಷೆಯ ನೃತ್ಯಗಳಿಗೆ ಅವಕಾಶವಿದೆ. ಪ್ರತೀ ತಂಡ ಗಳಿಗೆ 6 ರಿಂದ 8 ನಿಮಿಷಗಳ ಕಾಲ ಮಾತ್ರ ಸಮಯಾವಕಾಶ ನೀಡಲಾಗಿದೆ. ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನ ಕ್ರಮವಾಗಿ ರೂ.25ಸಾವಿರ, ರೂ 15ಸಾವಿರ ಹಾಗೂ ರೂ 10 ಸಾವಿರ ಮತ್ತು ಪ್ರಮಾಣ ಪತ್ರ ಪಾರಿತೋಷಕ ನೀಡಿ ಗೌರವಿಸಲಾಗುವುದು. ಭಾಗವಹಿಸುವ ಎಲ್ಲಾ ತಂಡಗಳಿಗೂ ಗೌರವಧನ ಪ್ರಮಾಣ ಪತ್ರ ಸ್ಮರಣಿಕೆ ನೀಡಿ ಗೌರವಿಸಲಾಗುವುದು. ಯಾವುದೇ ಕಾರಣಕ್ಕೂ ನೃತ್ಯ ಕಲಾವಿದರ ಹಾಗೂ ಹಾಡಿನ ಪುನರಾವರ್ತನೆ ಆಗಬಾರದು. ಹೆಸರು ನೋಂದಾಯಿಸುವಾಗ ಹಾಡನ್ನು ತಿಳಿಸಬೇಕು.
ಹಾಡು ಪುನರಾವರ್ತನೆ ಆದರೆ ಮೊದಲು ಬಂದ ಹಾಡನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಅನಂತರದ ಹಾಡನ್ನು ಬದಲಾಯಿಸಬೇಕು. ಮೊದಲು ಹೆಸರು ನೋಂದಾಯಿಸಿಕೊಳ್ಳುವ ಹತ್ತು ತಂಡಗಳಿಗೆ ಆದ್ಯತೆ ನೀಡಲಾಗುವುದು. ನೃತ್ಯದ ಹಾಡು, ವೇಷಭೂಷಣ ಹಾವ ಭಾವ ನೃತ್ಯ ನಿರ್ದೇಶನಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು. ಹಾಗೂ ನಿರ್ಣಾಯಕರ ಹಾಗೂ ಆಯೋಜಕರ ತೀರ್ಮಾನವೇ ಅಂತಿಮ. ಸ್ಪರ್ಧೆ ಬಳಿಕ ಚರ್ಚೆಗೆ ಯಾವುದೇ ಅವಕಾಶವಿಲ್ಲ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ತಂಡದ ಆಯ್ಕೆ ಪ್ರಕ್ರಿಯೆ ಇರುವುದರಿಂದ ನೀವು ಈ ಮೊದಲು ಪ್ರದರ್ಶಿಸಿದ ನೃತ್ಯದ ವಿಡಿಯೋ ಇದ್ದಲ್ಲಿ (3ರಿಂದ 5 ನಿಮಿಷ ) ಕಡ್ಡಾಯವಾಗಿ ಕಳುಹಿಸಬೇಕು
ನಿಮ್ಮ ತಂಡದ ಸಂಪೂರ್ಣ ವಿವರ ಹಾಗೂ ಕಲಾವಿದರ ಹೆಸರು ಹಾಗೂ ವಿಡಿಯೋವನ್ನು ವಾಟ್ಸಪ್ಪ್ ನಂಬರ್ 9653191425 ಮುಖೇನ ಕಳುಹಿಸಬೇಕು
ಹೆಚ್ಚಿನ ವಿವರಗಳಿಗಾಗಿ 9594867979 / namanafriends2005@gamil.com ಮೂಲಕ ಸಂಪರ್ಕಿಸುವಂತೆ ನಮನ ಫ್ರೆಂಡ್ಸ್ ಮುಂಬೈಯ ಸಂಸ್ಥಾಪಕ ಪ್ರಭಾಕರ ಬೆಳುವಾಯಿ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.