ಶ್ರೀ ಅಯ್ಯಪ್ಪ ಭಕ್ತವೃಂದ ಮಂಚಕಲ್ಲು ಸಿದ್ದಕಟ್ಟೆ ಇಲ್ಲಿ ಡಿಸೆಂಬರ್ 29ರಂದು ಅಯ್ಯಪ್ಪ ಸ್ವಾಮಿಯ ದೀಪಾರಾಧನೆ, ಅಪ್ಪ ಸೇವೆ, ಕೆಂಡ ಸೇವೆಯು ಮೂಡಬಿದ್ರೆ ಅಯ್ಯಪ್ಪ ದೇವಸ್ಥಾನದ ಗುರುಸ್ವಾಮಿ ಶ್ರೀ ಸುದರ್ಶನ್ ಎಂ ಇವರ ನೇತೃತ್ವದಲ್ಲಿ ನಡೆಯಲಿರುವುದರಿಂದ ಅವರು ಸೋಮವಾರ ಸಂಜೆ ಮಂಚಕಲ್ಲು ಅಯ್ಯಪ್ಪ ಸ್ವಾಮಿ ಶಿಬಿರಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಗುರುಸ್ವಾಮಿ ರಾಜೇಶ್ ಮಂಚಕಲ್ಲು, ಸಂದೇಶ್ ಶೆಟ್ಟಿ ಪೊಡುಂಬ, ಮಧುಸೂಧನ ಸಾಲಿಯಾನ್, ಸುರೇಶ್ ಕುಲಾಲ್, ದೇವರಾಜ್ ಸಾಲ್ಯಾನ್,ನವೀನ್ ಹೆಗ್ಡೆ, ಜಯಾನಂದ ದೋಟ, ಹರೀಶ್ ಪೂಜಾರಿ ಮಂಚಕಲ್ಲು, ಪ್ರಕಾಶ್ ಮೇಲುಗುಡ್ಡೆ, ಅಯ್ಯಪ್ಪ ಭಕ್ತ ವೃಂದ ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.