Breaking
25 Apr 2026, Sat

ಕೋರ್ಯಾರು ಶ್ರೀದುರ್ಗಾ ಮಹಮ್ಮಾಯೀ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ

ಬಂಟ್ವಾಳ: ತಾಲೂಕಿನ ಕುಕ್ಕಿಪಾಡಿ ಗ್ರಾಮದ ಕೋರ್ಯಾರು ಶ್ರೀ ದುರ್ಗಾ ಮಹಮ್ಮಾಯೀ ದೇವಸ್ಥಾನದ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವವು ಏ. 26 ರಿಂದ ಮೇ 02 ರ ತನಕ ಜರುಗಲಿದೆ ಎಂದು ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಗೌಡ ಮಂಚಕಲ್ಲು ತಿಳಿಸಿದ್ದಾರೆ .

ಅವರು ಬಂಟ್ವಾಳ ಪ್ರೆಸ್ ಕ್ಲಬ್ ನ್ನು ಕರೆದ ಪತ್ರಿಕಾ ಗೋಷ್ಠಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳ ವಿವರ ನೀಡಿದರು.

ಏ. 26 ರಂದು ಆದಿತ್ಯವಾರ 3 ಗಂಟೆಗೆ ಸಿದ್ದಕಟ್ಟೆ ನಲ್ಲೂರಂಗಡಿ ಬಸದಿಯಿಂದ ಹಸಿರು ಹೊರೆಕಾಣಿಕೆಯನ್ನು ಶ್ರೀ ಕುಕ್ಕೆ ಸುಬ್ರಮಣ್ಯ ಮಠದ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಯವರ ಶುಭ ಆಶೀರ್ವಾದ ದೊಂದಿಗೆ ಗಣ್ಯರ ಉಪಸ್ಥಿತಿಯಲ್ಲಿ ಸಂಗಬೆಟ್ಟು ವೀರಭದ್ರ ದೇವಸ್ಥಾನದ ಪ್ರಧಾನ ಅರ್ಚಕರಾದ ಪ್ರಭಾಕರ ಐಗಳ್ ಮತ್ತು ಸಿದ್ದಕಟ್ಟೆಯ ಪ್ರಸಿದ್ದ ವೈದ್ಯರಾದ ಡಾI ಪ್ರಭಾಚಂದ್ರ ಜೈನ್ ಚಾಲನೆ ನೀಡಲಿದ್ದಾರೆ .

ಈ ವೇಳೆ ಗಣ್ಯರಾದ ಕಿರಣ್ ಕುಮಾರ್ ಮಂಜಿಲ, ಜಗತ್ಪಾಲ ಶೆಟ್ಟಿ ಉಮನೊಟ್ಟು, ಮಹಾವೀರ ಜೈನ್, ನಿತ್ಯಾನಂದ ಪೂಜಾರಿ ಕೆಂತಲೆ, ಸಂತೋಷ್ ಕುಮಾರ್ ರಾಯಿಬೆಟ್ಟು , ಪ್ರಭಾಕರ ಆಚಾರ್ಯ,ಸದಾನಂದ ಕುಲಾಲ್ , ಮುಂತಾದವರು ಭಾಗವಹಿಸಲಿರುವರು .

ಸಂಜೆ ಗಂಟೆ 6 ಕ್ಕೆ ಸರಿಯಾಗಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ . ಏ. 27 ಮತ್ತು 28 ರಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ .

ಏ. 29 ರಂದು ಬೆಳಿಗ್ಗೆ ಗಂಟೆ 10.27 ಕ್ಕೆ ಮಿಥುನ ಲಗ್ನದಲ್ಲಿ ಪಂಚಲೋಹದ ಶ್ರೀ ದೇವಿಯ ಬಿಂಬ ಪ್ರತಿಷ್ಠೆ , ಮಧ್ಯಾಹ್ನ 3 ಗಂಟೆಗೆ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಪೇಜಾವರ ಅಧೋಕ್ಷಜ ಮಠ ರವರಿಂದ ಆರ್ಶೀವಚನ, ಸಂಜೆ ಗಂಟೆ 6 ರಿಂದ ಯಕ್ಷ ಕದಂಬ ಯಕ್ಷಗಾನ ಬಳಗ ಮಾವಿನಕಟ್ಟೆ ಇವರಿಂದ “ಯಜ್ಞ ಸಂರಕ್ಷಣಾ ಸೀತಾಕಲ್ಯಾಣ” . ರಾತ್ರಿ 08 ರಿಂದ ಡ್ಯಾನ್ಸಿಂಗ್ ಸ್ಟಾರ್ ಎಡಪದವು ಇವರಿಂದ “ಗಾನ ನೃತ್ಯ ವೈಭವ “ ಜರುಗಲಿದೆ .

ಏ. 30 ರಂದು 4.30ರಿಂದ ತತ್ವಮಸಿ ಶ್ರೀ ಅಯ್ಯಪ್ಪ ಭಜಕ ವೃಂದ ಪೊಳಲಿ ಇವರ ನೇತೃತ್ವದ ವಿವಿಧ ಭಜನಾ ಮಂಡಳಿಗಳಿಂದ “ಭಜನಾ ಸಂಗಮೋತ್ಸವ “ ವನ್ನು ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಬೆಳಾಲು ಇಲ್ಲಿನ ಧರ್ಮದರ್ಶಿ ಶ್ರೀ ಹರೀಶ್ ಅರಿಕೋಡಿ ಚಾಲನೆ ನೀಡಲಿದ್ದಾರೆ . ಸಂಜೆ 6 ರಿಂದ ಧಾರ್ಮಿಕ ಕಾರ್ಯಕ್ರಮ ಜರುಗಲಿದ್ದು , ಶ್ರೀ ಕ್ಷೇತ್ರ ಪೂಂಜಾ ದೇವಸ್ಥಾನದ ಆಸ್ರಣ್ಣರಾದ ಕೃಷ್ಣಪ್ರಸಾದ್ ಆಸ್ರಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ . ರಾತ್ರಿ ಗಂಟೆ 8.00 ರಿಂದ ತಾಂಬೂಲ ಕಲಾವಿದೆರ್ ಪುಂಜಾಲಕಟ್ಟೆ ಇವರಿಂದ “ಎಲ್ಲೆ ದಾದ ,ಏರೆಗ್ ಗೊತ್ತು “ ಹಾಸ್ಯಮಯ ನಾಟಕ ಜರುಗಲಿದೆ.

ಮೇ. 01 ರಂದು ಬೆಳಿಗ್ಗೆ 10.45 ಕ್ಕೆ ಒದಗುವ ಮಿಥುನ ಲಗ್ನ ಸುಮುಹೂರ್ತದಲ್ಲಿ “ಬ್ರಹ್ಮ ಕಲಶಾಭಿಷೇಕ” ನೇರವೆರಲಿದೆ. ಬೆಳಿಗ್ಗೆ ಗಂಟೆ 11.30 ಕ್ಕೆ ಸರಿಯಾಗಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು , ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ಪುತ್ತೂರು ಇದರ ಅಧ್ಯಕ್ಷರಾದ ಡಾIIಪ್ರಭಾಕರ ಭಟ್ ಕಲ್ಲಡ್ಕ ರವರು ದೀಪ ಪ್ರಜ್ವಲನೆ ಮಾಡಲಿದ್ದು , ಶ್ರೀ ಧಾಮ ಮಾಣಿಲದ ಶ್ರೀ ಶ್ರೀ ಮೋಹನದಾಸ ಪರಮ ಹಂಸ ಸ್ವಾಮೀಜಿಯವರು ಹಾಗೂ ಶ್ರೀ ಕ್ಷೇತ್ರ ಕಟೀಲಿನ ಕಮಲಾದೇವಿ ಪ್ರಸಾದ ಆಸ್ರಣ್ಣರು ಆರ್ಶೀವಚನ ನೀಡಲಿದ್ದಾರೆ.

ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ,ಉಳಿಪಾಡಿ ಅಧ್ಯಕ್ಷತೆ ವಹಿಸಲಿದ್ದು ,ಕರ್ನಾಟಕ ಸರಕಾರದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ , ಸಂಸದರಾದ ಕ್ಯಾ. ಬ್ರಿಜೇಶ್ ಚೌಟ , ಉಡುಪಿ ಚಿಕ್ಕ ಮಂಗಳೂರು ಕ್ಷೇತ್ರದ ಸಂಸದರಾದ ಕೋಟ ಶ್ರೀ ನಿವಾಸ ಪೂಜಾರಿ , ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್ , ಕರ್ನಾಟಕ ಸರಕಾರದ ಮಾಜಿ ಸಚಿವರು ರಮಾನಾಥ ರೈ , ಕರ್ನಾಟಕ ಸರಕಾರದ ಮಾಜಿ ಸಚಿವರು ಬಿ ನಾಗರಾಜ್ ಶೆಟ್ಟಿ, ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜಾ , ಮೂಲ್ಕಿ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಉಮಾನಾಥ ಕೋಟ್ಯಾನ್ , , ವಿಧಾನ ಪರಿಷತ್ತ್ ಸದಸ್ಯರಾದ ಮಂಜುನಾಥ ಭಂಡಾರಿ , ಕಿಶೋರ್ ಕುಮಾರ್ , ಪ್ರತಾಪ ಸಿಂಹ ನಾಯಕ್ , ಭಾರತಿ ಶೆಟ್ಟಿ, ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತ್ ಸದಸ್ಯರು ಮಲ್ಲಿಕಾ ಪಕ್ಕಳ , ರವಿಶಂಕರ ಬಡಾಜೆ , ಕೊಡಮಣಿತ್ತಾಯ ದೈವಸ್ಥಾನ ಪಡ್ಯಾರಬೆಟ್ಟ ಇಲ್ಲಿನ ಆಡಳಿತ ಮೊಕ್ತೇಸರರಾದ ಜಿ.ಜೀವಂಧರ ಬಲ್ಲಾಳ್ , ದ.ಕ ಜಿಲ್ಲಾ ಧಾರ್ಮಿಕ ಪರಿಷತ್ತ್ ಸದಸ್ಯರು ದೇವಪ್ಪ ಕುಲಾಲ್ , ಬಲವಂಡಿ ಕ್ಷೇತ್ರದ ಗಡಿಪ್ರಧಾನರು ದುರ್ಗಾದಾಸ್ ಶೆಟ್ಟಿ ಮಾವಂತೂರು , ಬಂಟ್ವಾಳ ಬಿಲ್ಲವ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ,ಬಿ ಜೆ ಪಿ ಮುಖಂಡ ಸಂದೇಶ್ ಅರೆಬೆಟ್ಟು , ಸ್ಟೋನ್ ಕೃಷರ್ ಓನರ್ಸ್ ಅಸೋಸಿಯೇಷನ್ (ರಿ) ನ ಡಾIರವೀಂದ್ರ ಶೆಟ್ಟಿ ಬಜಗೋಳಿ, ಧನಲಕ್ಷ್ಮೀ ಕ್ಯಾಶ್ಯೂ ಇಂಡಸ್ರ್ಟಿಸ್ ಮೂಡಬಿದ್ರೆಯ ಶ್ರೀಪತಿ ಭಟ್ ,ವೈಬ್ರೆಂಟ್ ಕಾಲೇಜು ಮೂಡಬಿದ್ರೆಯ ಸುಭಾಶ್ ಜ , ಸಜೀಪಮುನ್ನೂರು ಮೂರ್ತೆದಾರರ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ , ಕೊಡಮಣಿತ್ತಾಯ ದೈವಸ್ಥಾನ ಅರೆಮಾಲೆಬೆಟ್ಟದ ಅನುವಂಶಿಕ ಆಡಳಿತದಾರರಾದ ಸುಕೇಶ್ ಕುಮಾರ್ , ಭಾರತೀಯ ಜನತಾ ಪಕ್ಷದ ಬಂಟ್ವಾಳ ಇದರ ಅಧ್ಯಕ್ಷರಾದ ಆರ್.ಚೆನ್ನಪ್ಪ ಕೋಟ್ಯಾನ್ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ದಿನೇಶ್ ಡಿ , ಬಂಟ್ವಾಳ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಬೇಬಿ ಕುಂದರ್ , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ತುಂಗಪ್ಪ ಬಂಗೇರ, ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಸಿದ್ದಕಟ್ಟೆ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ರತ್ನಕುಮಾರ್ ಚೌಟ, ಸಿದ್ದಕಟ್ಟೆ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ನೋಟರಿ ವಕೀಲರಾದ ಸುರೇಶ್ ಶೆಟ್ಟಿ , ವಿಜಯ ಗೌಡ ಶಿಬ್ರಿಕರೆ ಭಾಗವಹಿಸಲಿದ್ದಾರೆ.

ಸಂಜೆ 5.00 ರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ “ಶ್ರೀ ದೇವಿ ಮಹಾತ್ಮೆ” ಯಕ್ಷಗಾನ ನಡೆಯಲಿದೆ .

ಮೇ. 02 ರಂದು ಸಂಜೆ ಗಂಟೆ 4.00 ರಿಂದ ಕಲ್ಲುರ್ಟಿ ಪಂಜುರ್ಲಿ ದೈವಗಳಿಗೆ “ನೇಮೋತ್ಸವ “ ಜರುಗಲಿದೆ.

ಪತ್ರಿಕಾ ಗೋಷ್ಠಿಯಲ್ಲಿ ಜೀರ್ಣೊದ್ದಾರ ಸಮಿತಿಯ ಗೌರವಾಧ್ಯಕ್ಷರಾದ ಪ್ರಭಾಕರ ಪ್ರಭು ,ದುರ್ಗಾದಾಸ್ ಶೆಟ್ಟಿ ಕರೆಂಕಿಜೆ , ಜೀರ್ಣೊದ್ದಾರ ಸಮಿತಿಯ ಅಧ್ಯಕ್ಷರಾದ ಗಂಗಾಧರ ಗೌಡ ಕುಕ್ಕೇಡಿ ,ಗುರಿಕಾರರಾದ ಗೋಪಾಲ ಗೌಡ , ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಹೇಮಚಂದ್ರ ಗೌಡ ಸಿದ್ದಕಟ್ಟೆ ,ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಉಮೇಶ್ ಗೌಡ ಮಂಚಕಲ್ಲು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *