Breaking
18 Jun 2026, Thu

ಪ್ರಗತಿಪರ ಕೃಷಿಕ ಕೆ. ರವೀಂದ್ರ ರೈ ನಿಧನ

ಬಂಟ್ವಾಳ: ರಾಯಿ ಸಮೀಪದ ಕೈತ್ರೋಡಿ ನಿವಾಸಿ, ಪ್ರಗತಿಪರ ಕೃಷಿಕ ಕೆ.ರವೀಂದ್ರ ರೈ (86) ಇವರು ಅಸೌಖ್ಯದಿಂದ ಏ. 16 ರಂದು ತಡರಾತ್ರಿ ಸ್ವಗೃಹದಲ್ಲಿ ನಿಧನರಾದರು.

ರವೀಂದ್ರ ರೈ ಅವರು ಪ್ರಗತಿಪರ ಕೃಷಿಕರಾಗಿ, ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಳದ ಮಾಜಿ ಆಡಳಿತ ಮೊಕ್ತೇಸರರಾಗಿ, ರಾಯಿ-ಕೊಯಿಲ ವಲಯ ಬಿಜೆಪಿ ಮಾಜಿ ಅಧ್ಯಕ್ಷರಾಗಿ ಗುರುತಿಸಿಕೊಂಡಿದ್ದರು. ಮೃತರ ಅಂತ್ಯಕ್ರಿಯೆ ಶುಕ್ರವಾರ ಮಧ್ಯಾಹ್ನ ಸ್ವಗೃಹ ಬಳಿ ನೆರವೇರಿತು.

ಮೃತರು ಪತ್ನಿ ಮತ್ತು ನಾಲ್ವರು ಪುತ್ರಿಯರನ್ನು ಆಗಲಿದ್ದಾರೆ.

Leave a Reply

Your email address will not be published. Required fields are marked *