Breaking
18 Jun 2026, Thu

‘ರೋಟರಿ ಬಸ್ ತಂಗುದಾಣ’ ಲೋಕಾರ್ಪಣೆ

ಬಂಟ್ವಾಳ: ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಬಂಟ್ವಾಳ- ಮೂಡುಬಿದ್ರೆ ರಸ್ತೆ ನಡುವಿನ ಬಾರೆಕಾಡು ಕ್ರಾಸ್ ಎಂಬಲ್ಲಿ ರೂ 1.30 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ‘ರೋಟರಿ ಬಸ್ ತಂಗುದಾಣ’ವನ್ನು ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ. ಇವರು ಏ. 15 ರಂದು ಸಂಜೆ ಲೋಕಾರ್ಪಣೆಗೊಳಿಸಿದರು.

ಮಂಗಳೂರು ಧರ್ಮಗುರು ಜೆರಾಲ್ಡ್ ಲೋಬೋ ಆಶೀರ್ವಚನ ನೀಡಿದರು. ಅಮ್ಟಾಡಿ ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷ ವಿಜಯ ಕುಮಾರ್, ಸಹಾಯಕ ಗವರ್ನರ್ ಉಮೇಶ್ ರಾವ್ ಮಿಜಾರ್, ಪ್ರಮುಖರಾದ ರಿತೇಶ್ ಬಾಳಿಗಾ, ಡಾ.ಶಿವಪ್ರಸಾದ್ ಶುಭ ಹಾರೈಸಿದರು. ಸ್ಥಳೀಯ ಪ್ರಯಾಣಿಕರು ಅನಿಸಿಕೆ ವ್ಯಕ್ತಪಡಿಸಿದರು.

ಕ್ಲಬ್ ನ ವಲಯ ಸೇನಾನಿ ರಾಮಚಂದ್ರ ಶೆಟ್ಟಿಗಾರ್, ಮಾಜಿ ಅಧ್ಯಕ್ಷರಾದ ಆಂಟೋನಿ ಸಿಕ್ವೇರಾ, ರಾಘವೇಂದ್ರ ಭಟ್, ಶ್ರುತಿ ಮಾಡ್ತಾ, ಎಂ.ಪದ್ಮರಾಜ ಬಲ್ಲಾಳ್ ಮಾವಂತೂರು, ಪ್ರಮುಖರಾದ ಕೆ.ರಮೇಶ್ ನಾಯಕ್ ರಾಯಿ, ಸೆಬೆಸ್ಟಿನ್ ಮಿನೇಜಸ್, ಅರುಣ್ ಮಾಡ್ತಾ, ಪ್ರೀತಂ ರಾಡ್ರಿಗಸ್, ಸೆರಾಲ್ಡ್ ಕ್ರಾಸ್ತ, ಸುಧೀರ್ ಕುಮಾರ್, ಗೀತಾ ಪಿ.ಬಲ್ಲಾಳ್, ಪ್ರೀತಾ ಸಿಕ್ವೇರಾ, ಸುಝಾನ್ ವಾಸ್, ಡಾ.ಕ್ಲಾರೆಟ್ ಡಿಸೋಜ, ಲವಿನಾ ಶಲ್ಮಾ ಮತ್ತಿತರರು ಉಪಸ್ಥಿತರಿದ್ದರು.

ಕ್ಲಬ್ಬಿನ ಅಧ್ಯಕ್ಷ ವಿಜಯ ಫೆರ್ನಾಂಡಿಸ್ ಸ್ವಾಗತಿಸಿ, ಕಾರ್ಯದರ್ಶಿ ಮೋಹನ್ ಕೆ. ಶ್ರೀಯಾನ್ ರಾಯಿ ವಂದಿಸಿದರು. ನಿಕಟಪೂರ್ವ ಅಧ್ಯಕ್ಷ ಸುರೇಶ್ ಶೆಟ್ಟಿ ಸಿದ್ಧಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *