ಬಂಟ್ವಾಳ: ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಶ್ರೀ ಶಾರದಾಂಬ ಭಜನಾ ಮಂದಿರದಲ್ಲಿ ಏ.11ರಂದು ಆರಂಭಗೊಂಡಿದ್ದ ‘ಸಂಸ್ಕಾರ ಬೇಸಿಗೆ ಶಿಬಿರ’ ಕಾರ್ಯಕ್ರಮ ಏ. 16 ಎಂಡ್ ಸಮಾಪನಗೊಂಡಿತು.

ಕಾಡಬೆಟ್ಟು ಶ್ರೀ ಶಾರದಾಂಬ ಬಾಲಗೋಕುಲ ಮತ್ತು ಶ್ರೀ ಶಾರದಾಂಬ ಭಜನಾ ಮಂದಿರ ವತಿಯಿಂದ ನಡೆದ 6 ದಿನಗಳ ಶಿಬಿರದಲ್ಲಿ ಯೋಗ, ನಿತ್ಯ ಶ್ಲೋಕ, ಭಜನೆ, ಭಗವದ್ಗೀತೆ, ಮಹಾಪುರುಷರ ಕಥೆಗಳು, ಪ್ರಥಮ ಚಿಕಿತ್ಸೆ, ಡ್ರಾಯಿಂಗ್ ಮತ್ತು ಕ್ರಾಫ್ಟ್, ತುಳುನಾಡಿನ ಸಂಸ್ಕೃತಿ, ಅಭಿನಯ ಗೀತೆ, ಅಗ್ನಿಹೋತ್ರ, ಯುಗಾದಿ ಆಚರಣೆ, ಮಾತೃ ವಂದನ, ಪೈಂಟಿಂಗ್, ಮನೆ ಮದ್ದು, ಮೌಲ್ಯ ಶಿಕ್ಷಣ, ಮ್ಯಾಪಿಂಗ್ ಮತ್ತಿತರ ಮಾಹಿತಿ ಸಂಪನ್ಮೂಲ ವ್ಯಕ್ತಿಗಳಿಂದ ನೀಡಲಾಯಿತು.

ಏ. 16 ರಂದು ಸಂಜೆ ಸಮಾಪನಗೊಂಡ ಬಳಿಕ ಸ್ಥಳೀಯ ಪಿಲಿಂಗಾಲು ಶ್ರೀ ಗಾಯತ್ರೀ ದೇವಿ ದೇವಸ್ಥಾನದಲ್ಲಿ ಯೋಗ ಮತ್ತು ಕುಂಭಕ ಯೋಗ ಬಗ್ಗೆ ದೇವಳದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್ ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಗಿರೀಶ್ ಶಿರ್ಲಾಲು, ಕೆ.ಬಾಬು ಸಪಲ್ಯ ಕಾಡಬೆಟ್ಟು, ರಾಜೇಶ್ವರಿ, ಜಯ ಪೂಜಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


