ಮಂಗಳೂರು: ಯುವಕನೋರ್ವ ಗುರುಪುರ ನದಿಗೆ ಹಾರಿದ ಘಟನೆ ಏ. 08 ರಂದು ನಡೆದಿದೆ.

ಯುವಕನನ್ನು ಕಜೆ ಪದವು ನಿವಾಸಿ ಕೌಶಿಕ್ ಎಂದು ಗುರುತಿಸಲಾಗಿದೆ.

ಏ.08 ರಂದು ಸಂಜೆ ಕೌಶಿಕ್ ಅವರು ಸ್ಕೂಟರ್ ನಲ್ಲಿ ಸೇತುವೆ ಬಳಿ ಬಂದಿದ್ದರು. ಬಳಿಕ ಸ್ಕೂಟರನ್ನು ಸೇತುವೆ ಬಳಿ ನಿಲ್ಲಿಸಿ ನದಿಗೆ ಹಾರಿದ್ದಾರೆ ಎನ್ನಲಾಗಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಜ್ಪೆ ಪೊಲೀಸರು ಧಾವಿಸಿ ತನಿಖೆ ನಡೆಸಿದ್ದಾರೆ. ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.


