Breaking
13 Aug 2026, Thu

ಅಕ್ಕೇರಿಪಾದೆಯಲ್ಲಿ ಪುನರ್ ನವೀಕರಣಗೊಂಡ ಗುಡಿಯಲ್ಲಿ ದೈವಗಳ ಪುನರ್ ಪ್ರತಿಷ್ಠೆ

ಬಂಟ್ವಾಳ: ಅಮ್ಡಾಡಿ ಗ್ರಾಮದ ಮಂಗ್ಲಿಮಾರ್ ಸಮೀಪದ ಅಕ್ಕೇರಿಪಾದೆ ಎಂಬಲ್ಲಿ ಪುನರ್ ನವೀಕರಣಗೊಂಡ ಗುಡಿಯಲ್ಲಿ ದೈವಗಳ ಪುನರ್ ಪ್ರತಿಷ್ಠೆ ಏ. 6 ರಂದು ನಡೆಯಿತು.

ಕ್ಷೇತ್ರದ ತಂತ್ರಿ ಉದಯ ಪಾಂಗಣ್ಣಾಯ ಇವರ ಮಾರ್ಗದರ್ಶನದಲ್ಲಿ ಪುರೋಹಿತ ನರಸಿಂಹ ಮಯ್ಯ ಮತ್ತಿತರರು ಬ್ರಹ್ಮಲಿಂಗೇಶ್ವರ ಸಹಿತ ರಕ್ತೇಶ್ವರಿ, ಅಣ್ಣಪ್ಪ ಸ್ವಾಮಿ ಮತ್ತು ಜುಮಾದಿ ಬಂಟ ದೈವಗಳ ಗುಡಿಯಲ್ಲಿ ಬಿಂಬ ಪುನರ್ ಪ್ರತಿಷ್ಠೆ ಮತ್ತು ಕಲಶಾಭಿಷೇಕ ನೆರವೇರಿಸಿದರು.

ಇದೇ ವೇಳೆ ಕಲಾಯಿ ಶ್ರೀ ಮಹಮ್ಮಾಯಿ ದೇವರಿಗೆ ದೃಢಕಲಶ, ಭೈರವ ಸಹಿತ ಕಲ್ಲುರ್ಟಿ ಪಂಜುರ್ಲಿ ದೈವ ಪ್ರತಿಷ್ಠೆ ಮತ್ತು ನಾಗ ಸಾನಿಧ್ಯದಲ್ಲಿ ವಿಶೇಷ ಪೂಜೆ ನಡೆಯಿತು. ಮಧ್ಯಾಹ್ನ ಮಂಗಲಿಮಾರು ಅಣ್ಣಪ್ಪ ಸ್ವಾಮಿ ದೈವಸ್ಥಾನದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ದೈವಸ್ಥಾನದ ಗಡಿಪ್ರಧಾನ ಬಡಾಜೆ ರವಿಶಂಕರ ಶೆಟ್ಟಿ, ಆರಾಧನಾ ಸಮಿತಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಪ್ರಮುಖರಾದ ಎಂ.ತುಂಗಪ್ಪ ಬಂಗೇರ, ದೇವಪ್ಪ ಕುಲಾಲ್, ಕರುಣೇಂದ್ರ ಪೂಜಾರಿ, ಮಲ್ಲಿಕಾ ವಿ.ಶೆಟ್ಟಿ, ಲೋಕೇಶ ಸುವರ್ಣ, ಪ್ರೇಮನಾಥ ಕರ್ಕೇರ, ನರಸಿಂಹ ಹೊಳ್ಳ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *