ಮೂಡುಬಿದಿರೆ: ತಾಲೂಕಿನ ಬೆಳುವಾಯಿ ಶ್ರೀ ಮಹಮ್ಮಾಯಿ ಕ್ಷೇತ್ರ, ಗೊಂದುಲುಕಟ್ಟೆ ಅಂಬೂರಿ (ರಿ.) ಇಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಉದ್ಯಾಪನ ಮಹೋತ್ಸವ ಹಾಗೂ ಚಂಡಿಕಾಯಾಗದ ಪ್ರಯುಕ್ತ ಅಂಬೂರಿ ಭಜನೋಚ್ಚಾಯ ಭಜಕರ ಭಕ್ತಿ ಸಂಗಮವು ಎ.10 ರಂದು ನಡೆಯಲಿದೆ.

ಸಂಜೆ 5.45ಕ್ಕೆ ಅಕ್ಷಯ್ ಸಾವ್ಯ, ಹರ್ಷ ಯು. ಕೋಟ್ಯಾನ್ ಹಾಗೂ ಲಕ್ಷಣ್ ನಾಯ್ಕ್ ಅವರಿಂದ ಗುರುಪೂಜನೀಯ ಕಾರ್ಯಕ್ರಮ ನಡೆಯಲಿದೆ. ಸಂಜೆ 6.30ಕ್ಕೆ ಮೆರವಣಿಗೆಯ ಮೂಲಕ ಮಂಡಲ ಪ್ರವೇಶ, ಬಳಿಕ 6.45ಕ್ಕೆ ದೀಪಪ್ರಜ್ವಲನೆ ನಡೆಯಲಿದೆ.

ನಂತರ ಮೂಡುಬಿದಿರೆಯ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ, ಕಟೀಲು ಶ್ರೀ ಕ್ಷೇತ್ರದ ಶ್ರೀ ಶ್ರೀ ಹರಿನಾರಾಯಣ ಅಸ್ರಣ್ಣರು, ಬೆಳುವಾಯಿ ಶ್ರೀ ಕ್ಷೇತ್ರದ ಕಾನನದ ವೇದಮೂರ್ತಿ ಶ್ರೀ ಕೆ.ಎಸ್. ಅನಂತ ಅಸ್ರಣ್ಣರು ಸೇರಿದಂತೆ ಹಲವರಿಂದ ಭಜನೋಚ್ಚಾಯ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಬಳಿಕ ಸಂಜೆ 7.00ಕ್ಕೆ ಅಂಬೂರಿ ಭಜನೋಚ್ಚಾಯ ಪ್ರಾರಂಭವಾಗಲಿದೆ.

ರಾತ್ರಿ 8.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಇದರ ಅಧ್ಯಕ್ಷತೆಯನ್ನು ಅಂಬೂರಿ ಶ್ರೀ ಮಹಮ್ಮಾಯಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ನವೀನ್ ಚಂದ್ರ ಜೈನ್ ವಹಿಸಲಿದ್ದಾರೆ. ಧಾರ್ಮಿಕ ಉಪನ್ಯಾಸವನ್ನು ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ್ ಶೆಟ್ಟಿ, ಕಾರ್ಕಳ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಲ್ಕಿ-ಮೂಡುಬಿದಿರೆ ಕ್ಷೇತ್ರದ ಶಾಸಕರಾದ ಉಮಾನಾಥ ಕೋಟ್ಯಾನ್ ಭಾಗವಹಿಸಲಿದ್ದಾರೆ.









