Breaking
26 Mar 2026, Thu

ಕ್ಷುಲಕ ಕಾರಣಕ್ಕೆ ಪತಿಯ ಜೊತೆ ಜಗಳ: ತಾಯಿ, ಮಗಳು ನಾಪತ್ತೆ

ಉಡುಪಿ: ಕ್ಷುಲಕ ಕಾರಣಕ್ಕೆ ಪತಿಯೊಂದಿಗೆ ಜಗಳವಾಡಿ ತಾಯಿ ಹಾಗೂ ಮಗಳು ನಾಪತ್ತೆಯಾದ ಘಟನೆ ಮಾ. 20 ರಂದು ಬೆಳಪು ಗ್ರಾಮದ ಪುಂಚಲಕಾಡಿನಲ್ಲಿ ನಡೆದಿದೆ.

ನಾಪತ್ತೆಯಾದವರನ್ನು ಕಾಪು ತಾಲೂಕಿನ ಬೆಳಪು ಗ್ರಾಮದ ಪುಂಚಲಕಾಡು ನಿವಾಸಿ ರೇಣುಕಾ ಗಂಗಾಧರ್ ಪೂಜೇರ್ (28) ಹಾಗೂ ಪುತ್ರಿ ಪ್ರತೀಕ್ಷಾ ಗಂಗಾಧರ್ ಪೂಜೇರ್ (11) ಎಂದು ಗುರುತಿಸಲಾಗಿದೆ.

ಮಾ. 20 ರಂದು ಊಟದ ವಿಚಾರವಾಗಿ ಪತಿಯೊಂದಿಗೆ ಜಗಳವಾಡಿದ ಬಳಿಕ ಗಂಗಾಧರ್ ಅವರು ಕೆಲಸಕ್ಕೆ ತೆರಳಿದ್ದರು. ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದಾಗ ಮನೆಗೆ ಬೀಗ ಹಾಕಿರುವುದು ಗಮನಕ್ಕೆ ಬಂದಿದೆ.

ಪತಿ ಗಂಗಾಧರ್ ಅವರು ಎಲ್ಲೆಡೆ ಹುಡುಕಾಟ ನಡೆಸಿದರೂ ಪತ್ನಿ ಮತ್ತು ಮಗಳ ಸುಳಿವು ಸಿಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *