Breaking
26 Mar 2026, Thu

ಮನೆಗೆ ನುಗ್ಗಿ ಹಲ್ಲೆ: ಆರೋಪಿಯ ಬಂಧನ

ಉಳ್ಳಾಲ: ಮನೆಗೆ ನುಗ್ಗಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಉಳ್ಳಾಲ ಖಿಲ್ರಿಯಾ ನಗರ ನಿವಾಸಿ ನಿಫಾನ್ ಅಹ್ಮದ್ ಪಾಷ (33) ಎಂದು ಗುರುತಿಸಲಾಗಿದೆ.

ಫೆ. 5 ರಂದು ಕೋಟೆಪುರದ ಮಹಮ್ಮದ್ ತಸ್ವೀರ್ ಅವರ ಮನೆಗೆ ನಿಫಾನ್ ಹಾಗೂ ಆತನ ಸಹಚರರಾದ ನಿಝಪತ್ ಅಲಿ ಮತ್ತು ಅಮೀರ್ ಸುಹೈಲ್ ನುಗ್ಗಿ, ತಸ್ವೀರ್ ಮೇಲೆ ಹಲ್ಲೆ ನಡೆಸಿ ಅವರ ಮೊಬೈಲ್ ಫೋನ್‌ನ್ನು ದೋಚಿದ್ದರು ಎಂದು ತಿಳಿದುಬಂದಿದೆ.

ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Leave a Reply

Your email address will not be published. Required fields are marked *