Breaking
23 Mar 2026, Mon

ರೇಮಂಡ್ ಡಿಕುನ್ಹಾ ತಾಕೊಡೆ ರವರ ಬೊಳ್ಳಿಲು ತುಳು ಪುಸ್ತಕ ಬಿಡುಗಡೆ ಹಾಗೂ ಹುಟ್ಟೂರ ಸನ್ಮಾನ

ಮೂಡುಬಿದಿರೆ: ತುಳುಕೂಟ, ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್ ಕ್ಲಬ್, ತ್ರಿಭುವನ್ ಜೆಸಿಐ, ಸೀನಿಯರ್ ಚೇಂಬರ್, ರೋಟರಿ ಕ್ಲಬ್ ಆಫ್ ಟೆಂಪಲ್ ಟೌನ್, ತಾಕೊಡೆ ಅಭಿಮಾನಿ ಬಳಗ, ರಿಕ್ಷಾ ಚಾಲಕ ಮಾಲಕರುಗಳ ಸಂಯುಕ್ತ ಆಶ್ರಯದಲ್ಲಿ ಮಾ. 22 ರಂದು ಸಮಾಜ ಮಂದಿರದಲ್ಲಿ ರೇಮಂಡ್ ಡಿಕುನ್ಹಾ ರ ಬೊಳ್ಳಿಲು ತುಳು ಪುಸ್ತಕ ಬಿಡುಗಡೆಗೊಳಿಸಿ ಹಾಗೂ ಹುಟ್ಟೂರ ಸನ್ಮಾನ ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮದ ಆರಂಭದಲ್ಲಿ ಉದಯೋನ್ಮುಖ ಚುಟುಕು ಕವಿಗಳ ಕವಿಗೋಷ್ಠಿ ಜರುಗಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವಾ ಅವರು ಪುಸ್ತಕವನ್ನು ಬಿಡುಗಡೆಗೊಳಿಸಿ, ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ರೇಮಂಡ್ ಡಿ ಕುನ್ಹಾ ಅವರಿಗೆ ಶುಭಾಶಯಗಳನ್ನು ತಿಳಿಸಿದರು. “ತುಳು ನಮ್ಮ ಭಾಷೆ , ತುಳು ಲಿಪಿಯಲ್ಲಿ ತಮ್ಮ ಜನ್ಮೂರಿನಲ್ಲಿ ಇಂತಹ ಕೃತಿ ಬಿಡುಗಡೆ ಮಾಡಿರುವುದು ನಮಗೆ ಹೆಮ್ಮೆಯ ವಿಷಯ. ಯುವಜನರು ಹಾಗೂ ವಿದ್ಯಾರ್ಥಿಗಳು ಇಂತಹ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಕೃತಕ ಬುದ್ಧಿಮತ್ತೆಯಿಂದ ಎಲ್ಲ ಜ್ಞಾನ ದೊರೆಯುವುದಿಲ್ಲ; ಸಾಹಿತ್ಯಕಾರರು ನೀಡುವ ಜ್ಞಾನ ಅಮೂಲ್ಯ. ಆದ್ದರಿಂದ ಸಾಹಿತ್ಯ ಮತ್ತು ಸಾಹಿತ್ಯಕಾರರ ಮಹತ್ವ ಅಪಾರ” ಎಂದು ಅವರು ಹೇಳಿದರು.

ಗೀತಾ ಲಕ್ಷ್ಮೀಶ್ ಶೆಟ್ಟಿ ಅವರು ‘ನಾಲೊದಿ ಬೊಳ್ಳಿಲು’ ಕೃತಿಯ ಪರಿಚಯ ಮಾಡಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೆ. ಅಭಯಚಂದ್ರ ಜೈನ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, “ಜ್ಞಾನ, ನೀತಿ ಹಾಗೂ ಪ್ರಾಮಾಣಿಕತೆಯಲ್ಲಿ ನಿಷ್ಠೆಯಿಂದ ಕೆಲಸ ಮಾಡಿದಾಗ ಇಂತಹ ಸನ್ಮಾನಗಳು ಸ್ವತಃ ಬರುತ್ತವೆ. ರೇಮಂಡ್ ಡಿ ಕುನ್ಹಾ ಅವರೊಂದಿಗೆ ನನ್ನ ಒಡನಾಟ ಬಹಳ ಹಳೆಯದು. ಅವರ ಸರಳತೆ ಮತ್ತು ನಿಷ್ಠೆ ಅವರನ್ನು ವಿಶಿಷ್ಟ ವ್ಯಕ್ತಿತ್ವದ ಪತ್ರಕರ್ತನನ್ನಾಗಿ ಮಾಡಿದೆ” ಎಂದು ಹೇಳಿದರು.

ವೇದಿಕೆಯಲ್ಲಿ ಚಂದ್ರಹಾಸ್ ದೇವಾಡಿಗ, ಅಲ್ಬರ್ಟ್ ಡಿ’ಅಲ್ಮೇಡಾ, ನವೀನ್ ಸಾಲಿಯನ್, ಸೀತಾರಾಮ ಆಚಾರ್ಯ, ಸುಧಾಕರ್ ಶೆಟ್ಟಿ, ರಾಜೇಶ್, ಧನಕೀರ್ತಿ ಬಲಿಪ, ಪುಷ್ಪರಾಜ್, ಪ್ರತಾಪ್, ಅನಂತವೀರ ಉಪಸ್ಥಿತರಿದ್ದರು. ಸುಧರ್ಷನ್ ಮೂಡುಬಿದಿರೆ ಹಾಗೂ ಫಾ. ಮೈಕೆಲ್ ಸಾಂತುಮಯೋರ್, ಮೂಡುಬಿದ್ರಿ ಪತ್ರಕರ್ತ ಸಂಘದ ಎಲ್ಲಾ ಸದಸ್ಯರು ಭಾಗವಹಿಸಿ ಶುಭ ಕೋರಿದರು.

ಸದಾನಂದ ನಾರಾವಿ ಅವರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮವನ್ನು ವಿನಯಚಂದ್ರ ಅವರು ನಿರ್ವಹಿಸಿದರು.

Leave a Reply

Your email address will not be published. Required fields are marked *