ಬಂಟ್ವಾಳ : ಶ್ರೀ ಕಲ್ಲುರ್ಟಿ – ಕಲ್ಕುಡ ಸೇವಾ ಟ್ರಸ್ಟ್ (ರಿ.)ಕೆದ್ದೇಲು, ನರಿಕೊಂಬು ಇದರ 20ನೇ ವರ್ಷದ ಅಂಗವಾಗಿ ಸಸಿಹಿತ್ಲು ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸಸಿಹಿತ್ಲು ಮಂಗಳೂರು ಇವರಿಂದ ಶ್ರೀ ದೇವದಾಸ್ ಈಶ್ವರಮಂಗಲ ವಿರಚಿತ ಬಂಟಮಲೆ ಭಾರ್ಗವಿ ಎಂಬ ತುಳು ಯಕ್ಷಗಾನ ಬಯಲಾಟವು ಮಾ. 22 ರಂದು ನರಿಕೊಂಬು ಗ್ರಾಮದ ಕೆದ್ದೇಲು ಬಾಕಿಮಾರು ಗದ್ದೆಯಲ್ಲಿ ನಡೆಯಲಿದೆ.

ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು
ಕಲ್ಲುರ್ಟಿ – ಕಲ್ಕುಡ ಸೇವಾ ಟ್ರಸ್ಟ್ (ರಿ.)ಕೆದ್ದೇಲು, ನರಿಕೊಂಬು ಅಧ್ಯಕ್ಷರಾದ ರಂಜಿತ್ ಕೆದ್ದೇಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












