Breaking
22 Sep 2026, Tue

ಎಡುವೆಂಚರ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಂಶುಪಾಲರ ಕಚೇರಿ ಉದ್ಘಾಟನೆ

ಸದಾಶಿವ ಶಿಕ್ಷಣ ಪ್ರತಿಷ್ಠಾನದ ಶಿಕ್ಷಣ ಸಂಸ್ಥೆಯಾದ ಎಡುವೆಂಚರ್ ಪದವಿ ಪೂರ್ವ ಕಾಲೇಜಿನಲ್ಲಿ ಮಾ.08 ರಂದು ಪ್ರಾಂಶುಪಾಲರ ಕಚೇರಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.


ಗಣಹೋಮ ನೆರವೇರಿಸಿದ ಬಳಿಕ ಸಂಸ್ಥೆಯ ಅಧ್ಯಕ್ಷರಾದ ಅಮೃತ್ ರೈ ಹಾಗೂ ಕಾರ್ಯದರ್ಶಿಗಳಾದ ರಕ್ಷಿತಾ ಅಮೃತ್ ರೈರವರ ಉಪಸ್ಥಿತಿಯಲ್ಲಿ ಪ್ರಾಂಶುಪಾಲರಾದ ಮಹೇಶ್ ಕೆ. ಎನ್ ರವರು ಔಪಚಾರಿಕವಾಗಿ ಪ್ರಾಂಶುಪಾಲ ಹುದ್ದೆಯನ್ನು ವಹಿಸಿಕೊಂಡರು.


ಸಂಸ್ಥೆಯ ಅಧ್ಯಕ್ಷರಾದ ಅಮೃತ್ ರೈಯವರು ಪ್ರಾಂಶುಪಾಲರಾದ ಮಹೇಶ್ ಕೆ. ಎನ್ ರವರ ಬಗ್ಗೆ ಮಾತನಾಡುತ್ತಾ, ನಾವು ಕಂಡ ಅತ್ಯಂತ ವಿರಳ ವ್ಯಕ್ತಿತ್ವದ ಸರಳ ವ್ಯಕ್ತಿ. ಹಲವು ವರ್ಷಗಳ ಬೋಧನಾ ವೃತ್ತಿಯ ಅನುಭವ ಹೊಂದಿರುವ ಶ್ರೀಯುತರು ನಮ್ಮ ಈ ಸುಂದರ ವಿದ್ಯಾ ಸಂಸ್ಥೆಯ ನಿರ್ಮಾಣದಲ್ಲಿ ಅಹರ್ನಿಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಾಂಶುಪಾಲ ಹುದ್ದೆಗೆ ಅಗತ್ಯದ ಎಲ್ಲಾ ಅರ್ಹತೆಗಳನ್ನು ಹೊಂದಿದವರಾಗಿದ್ದಾರೆ. ನಿಮ್ಮ ನಾಯಕತ್ವದಲ್ಲಿ ವಿದ್ಯಾಸಂಸ್ಥೆ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆಯುವಂತಾಗಲಿ ಎಂದು ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಸದಾಶಿವ ಶಿಕ್ಷಣ ಪ್ರತಿಷ್ಠಾನದ ಖಜಾಂಚಿಗಳಾದ ಅಶ್ವಥ್ ರೈ, ಟ್ರಸ್ಟಿಗಳಾದ ಬಿ.ಮೋಹನ್ ಕುಮಾರ್, ಸಮತಾ ಕಿಶೋರ್, ದೀಪಿಕಾ ಸಂದೇಶ್ ಸಂಸ್ಥೆಯ ಹಿತೈಷಿಗಳಾದ ನೀಲವೇಣಿ ಎಸ್. ರೈ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *