ಬಂಟ್ವಾಳ : ಶಂಭೂರು ಗ್ರಾಮದ ದಿಂಡಿಕೆರೆ ಜೋಡುಸ್ಥಾನ ಎಂಬಲ್ಲಿ ವೈದ್ಯನಾಥ ಜುಮಾದಿ ಬಂಟ ದೈವಗಳ ವಾರ್ಷಿಕ ನೇಮೋತ್ಸವ ಮಂಗಳವಾರ ರಾತ್ರಿ ನಡೆಯಿತು.

ಅಡೆಪಿಲ ಭಂಡಾರದ ಮನೆಯಲ್ಲಿ ಸೋಮವಾರ ರಾತ್ರಿ ಶ್ರೀ ಧರ್ಮರಸು ದೈವಕ್ಕೆ ನೇಮೋತ್ಸವ ನಡೆದು, ದಿಂಡಿಕೆರೆ ಜೋಡುಸ್ಥಾನಕ್ಕೆ ಮಂಗಳವಾರ ಸಂಜೆ ಭಂಡಾರ ಬಂದು ರಾತ್ರಿ ವೈದ್ಯನಾಥ ನೇಮೋತ್ಸವ ನಡೆಯಿತು. ಜುಮಾದಿ ಬಂಟ ದೈವಗಳ ನೇಮೋತ್ಸವ ಬುಧವಾರ ರಾತ್ರಿ ನೆರವೇರಿತು.


ಈ ಸಂದರ್ಭದಲ್ಲಿಆರಾಧನಾ ಸಮಿತಿ ಅಧ್ಯಕ್ಷ ನವೀನ್ ಕೋಟ್ಯಾನ್, ಗೌರವಾಧ್ಯಕ್ಷ ಸೀತಾರಾಮ ಪೂಜಾರಿ, ರಮೇಶ ಪೂಜಾರಿ ಭಂಡಾರದ ಮನೆ, ಪ್ರಧಾನ ಕಾರ್ಯದರ್ಶಿ ಹೇಮಚಂದ್ರ ಶಂಭೂರು, ಮೋನಪ್ಪ ಸಪಲ್ಯ, ಪ್ರಧಾನ ಅರ್ಚಕ ಜಗನ್ನಾಥ ಅಡೆಪಿಲ ಭಂಡಾರದ ಮನೆ, ಶೇಖರ ಅಡೆಪಿಲ, ಅಣ್ಣು ಪೂಜಾರಿ ಬಾವಮನೆ, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ, ಮಾಜಿ ಪುರಸಭಾಧ್ಯಕ್ಷ ವಾಸು ಪೂಜಾರಿ, ಮಾಜಿ ಸದಸ್ಯ ಜಗದೀಶ ಕುಂದರ್, ತಾ.ಪಂ.ಮಾಜಿ ಉಪಾಧ್ಯಕ್ಷ ಆನಂದ ಶಂಭೂರು ಮತ್ತಿತರರು ಉಪಸ್ಥಿತರಿದ್ದರು.






