ಬಂಟ್ವಾಳ: ಶ್ರೀ ಸಜೀಪ ಮಾಗಣೆಯ ಮಿತ್ತಮಜಲು ಕ್ಷೇತ್ರದ ಬ್ರಹ್ಮಕಲಶೋತ್ಸವದ ನಿಮಿತ್ತ ಮಹಿಳಾ ಸಮಿತಿ ಸಭೆಯು ಅನ್ನಪಾಡಿಯ ಶ್ರೀ ಬಾಲ ಗಣಪತಿ ದೇವಸ್ಥಾನದಲ್ಲಿ ಜರುಗಿತು.

ಸಭೆಯಲ್ಲಿ ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮದ ಬಗ್ಗೆ ವಿವರ ನೀಡಿದರು. ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಯಶವಂತ ದೆರಾಜೆಗುತ್ತು ಮಹಿಳೆಯರ ಜವಾಬ್ದಾರಿ ವಿವರಿಸಿದರು .

ಈ ಸಂದರ್ಭದಲ್ಲಿ ಮಹಿಳಾ ಸಮಿತಿ ಅಧ್ಯಕ್ಷ ವಿಜಯ, ಪ್ರಮುಖರಾದ ರಮೇಶ್ ಅನ್ನಪಾಡಿ, ಜಯಪ್ರಕಾಶ್ ಪೆರುವ, ಲಿಂಗಪ್ಪ ದೋಟ,ಕೆ ಸದಾನಂದ ಶೆಟ್ಟಿ, ವಿಶ್ವನಾಥ ಬೆಳ್ಚಡ, ರತ್ನಾಕರ ನಾಡಾರ್, ಪ್ರಶಾಂತ್, ಹರೀಶ್ ಬಂಗೇರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.






