ಉಡುಪಿ: ಮಣಿಪುರ ಗ್ರಾಮದ ಅರಬಿ ಕೆನರಾಡಿ ಎಂಬಲ್ಲಿ ವೃದ್ದೆಯೊಬ್ಬರನ್ನು ಕ್ಷುಲಕ ಕಾರಣಕ್ಕೆ ಇಬ್ಬರು ಸಹೋದರರು ಕೊಲೆ ಮಾಡಿದ ಘಟನೆ ಮಾ.9 ರಂದು ನಡೆದಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೊಲೆಗೀಡಾದವರನ್ನು ಕೆನರಾಡಿಯ ವನಜಾಪೂಜಾರ್ತಿ (೬೦) ಎಂದು ಗುರುತಿಸಲಾಗಿದೆ. ಬಂಧಿತರನ್ನು ಪ್ರವೀಣ್ ಮೆಂಡೊನ್ಸಾ ಮತ್ತು ವಲೇರಿಯನ್ ಮೆಂಡಾನ್ಸಾ ಎಂದು ತಿಳಿದುಬಂದಿದೆ.


ನೆರೆಹೊರೆಯವರಾಗಿರುವ ಪ್ರವೀಣ್ ಮೆಂಡೊನ್ಸಾ ಮತ್ತು ವಲೇರಿಯನ್ ಅವರು ವನಜಾ ಪೂಜಾರ್ತಿ (60) ಅವರೊಂದಿಗೆ ಮದ್ಯ ಸೇವಿಸುತ್ತಿದ್ದರು. ಈ ವೇಳೆ ಕ್ಷುಲ್ಲಕ ವಿಷಯಕ್ಕೆ ಜಗಳ ಉಂಟಾಗಿ , ವಲೇರಿಯನ್ ಮತ್ತು ಪ್ರವೀಣ್, ವನಜಾ ಪೂಜಾರ್ತಿಯ ಮೇಲೆ ಹರಿತವಾದ ಆಯುಧದಿಂದ ಕೊಲೆಗೈದಿದ್ದಾರೆ.
ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






