Breaking
20 Jun 2026, Sat

ತಡರಾತ್ರಿ ಮನೆಗೆ ನುಗ್ಗಿದ ಕಳ್ಳರು: 61 ಗ್ರಾಂ ಚಿನ್ನಾಭರಣ ಕಳವು

ಬಂಟ್ವಾಳ: ಮನೆಯೊಂದಕ್ಕೆ ಕಳ್ಳರು ನುಗ್ಗಿ ಚಿನ್ನಾಭರಣ ಕಳವು ಮಾಡಿದ ಘಟನೆ ಮಾ. 8 ರಂದು ಬಿ.ಸಿ.ರೋಡಿನ ಕೈಕುಂಜ ಎಂಬಲ್ಲಿ ನಡೆದಿದೆ.

ಮಾ. 8 ರಂದು ತಡರಾತ್ರಿ ಕಳ್ಳರು ಹಿಂಬದಿ ಬಾಗಿಲಿನ ಚಿಲಕವನ್ನು ಯಾವುದೋ ಸಾಧನದಿಂದ ಮುರಿದು ಮನೆಯ ಒಳಗೆ ಪ್ರವೇಶಿಸಿ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ ಎನ್ನಲಾಗಿದೆ.

ಕಳ್ಳರು ಒಟ್ಟು 61 ಗ್ರಾಂ ಚಿನ್ನ ಕಳವು ಮಾಡಿದ್ದಾರೆ ಎಂದು ಮನೆಯೊಡತಿಯ ಪುತ್ರಿ ಅನಿಷಾ ಎಂಬವರು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಈ ಕುರಿತು ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *