Breaking
25 Sep 2026, Fri

ಅನಾರೋಗ್ಯದಿಂದ ಸಂಕಷ್ಟದಲ್ಲಿರುವ ಪುರಂದರ ದಾಸ್‌ಗೆ ಕರುನಾಡು ಚಾರಿಟೇಬಲ್ ಟ್ರಸ್ಟ್ ನಿಂದ ಆರ್ಥಿಕ ನೆರವು

ಬೆಳ್ತಂಗಡಿ: ಕರುನಾಡು ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ 2026ರ ಫೆಬ್ರವರಿಯ 5ನೇ ತಿಂಗಳ ಮಾಸಿಕ ಸೇವಾ ಹಸ್ತಾಂತರದ ಅಂಗವಾಗಿ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ ನಿವಾಸಿ ಪುರಂದರ ದಾಸ್ ಅವರಿಗೆ ಆರ್ಥಿಕ ನೆರವು ನೀಡಲಾಯಿತು.

ಬೆನ್ನುಮೂಳೆ ಅಪಘಾತದಿಂದ ಸೊಂಟದ ಕೆಳಭಾಗದ ಸ್ವಾಧೀನ ಕಳೆದುಕೊಂಡಿರುವ ಪುರಂದರ ದಾಸ್ ಅವರು ಕಿಡ್ನಿ ವೈಫಲ್ಯದಿಂದಲೂ ಬಳಲುತ್ತಿದ್ದು, ಚಿಕಿತ್ಸೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಅವರ ವೈದ್ಯಕೀಯ ವೆಚ್ಚಕ್ಕೆ ನೆರವಾಗುವ ಉದ್ದೇಶದಿಂದ ರೂ. 12,000 ಮೊತ್ತವನ್ನು ಮಾರ್ಚ್ 01ರಂದು ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್‌ನ ಎಲ್ಲಾ ಪದಾಧಿಕಾರಿಗಳು ಹಾಗೂ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *