ಉಡುಪಿ : ಮಲ್ಪೆಯಲ್ಲಿ ಯುವಕರಿಬ್ಬರು ಹಿಂದೂ ಸಂಘಟನೆಯ ಮುಖಂಡ ಮಂಜು ಕೊಳ ಅವರಿಗೆ ಚೂರಿ ಇರಿದ ಘಟನೆ ಮಾ. 03 ರಂದು ನಡೆದಿದೆ.

ಜೋಡಿಯೊಂದರ ಪ್ರೇಮದ ವಿಚಾರವಾಗಿ ರಾಜಿಪಂಚಾಯಿತಿ ಮಾಡಲು ಯುವಕರಿಬ್ಬರನ್ನು ಮಲ್ಪೆ ಬೀಚ್ ಗೆ ಕರೆದಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ. ಪರಿಣಾಮ ಅಲ್ಲೇ ಕುಸಿದ ಮಂಜು ಕೊಳ ಅವರನ್ನು ತಕ್ಷಣವೇ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.








