Breaking
4 Mar 2026, Wed

ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಸಾವಯವ ಪ್ರಗತಿಪರ ಸಾವಯವ ಕೃಷಿಕರಾದ ಎಲ್. ಎಲ್.ಬಿ ಪದವೀಧರ ದೇವಿಪ್ರಸಾದ್ ಕೆ.ಗೌಡ ರವರಿಗೆ ಕನ್ನಡಿಗ 2026 ಪ್ರಶಸ್ತಿ

ಬೆಳ್ತಂಗಡಿ : ನ್ಯೂಸ್ 18 ಕನ್ನಡ ಚಾನೆಲ್ ಅರ್ಪಿಸುವ ಈ ವರ್ಷದ ಕನ್ನಡಿಗ 2026 ಅವಾರ್ಡ್ ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಸಾವಯವ ಪ್ರಗತಿಪರ ಸಾವಯವ ಕೃಷಿಕರಾದ ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮ ಕಡಮ್ಮಾಜೆ ಫಾರ್ಮ್ಸ್ ನ  ದಿ. ದಿನಕರ ಗೌಡ ದಂಪತಿಗಳ ಪುತ್ರ ಎಲ್. ಎಲ್.ಬಿ ಪದವೀಧರ ದೇವಿಪ್ರಸಾದ್ ಕೆ. ಗೌಡ ರವರಿಗೆ ಮಾರ್ಚ್ 03 ರಂದು ಬೆಂಗಳೂರು ನಲ್ಲಿ  ಕಂದಾಯ ಸಚಿವ ಕೃಷ್ಣ ಬೈರೇ ಗೌಡ  ರವರು ಪ್ರಶಸ್ತಿ ನೀಡಿ ಗೌರವಿಸಲಾಯಿತು. 

 ಈ ಸಂದರ್ಭದಲ್ಲಿ ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ನ್ಯೂಸ್ 18 ಕನ್ನಡ ಸಂಪಾದಕ ಹರಿಪ್ರಸಾದ್  ಹಾಗೂ ವಿವಿಧ ಕ್ಷೇತ್ರದ ಗಣ್ಯರು, ಸಿನಿಮಾ ತಾರೆಯರು, ಸಾಧಕರು ಉಪಸ್ಥಿತರಿದ್ದರು. 

ದೇವಿಪ್ರಸಾದ್ ಕೆ. ಗೌಡ ಅವರು ಅಡಿಕೆ, ತೆಂಗು, ಕಾಳು ಮೆಣಸು,ಹಣ್ಣು ಹಂಪಲು, ಮೀನುಗಾರಿಕೆ, ಕೋಳಿಸಾಕಣೆ, ಹೈನುಗಾರಿಕೆ, ಹಾಗೂ ವಿವಿಧ ರೀತಿಯ ಪ್ರಾಣಿ ಪಕ್ಷಿಗಳ ಸಾಕಣೆಯ ಜೊತೆಗೆ ಸುಸ್ಥಿರ ಮಾದರಿಯಲ್ಲಿ ಬೆಳೆಸುವ ಮಾದರಿ ಕೃಷಿಕರಾಗಿ ಸಮಗ್ರ ಕೃಷಿಯಲ್ಲಿ ಗುರುತಿಸಿಕೊಂಡಿದ್ದಾರೆ.

ಇವರ ತಾಯಿ ಕುಸುಮ, ಪತ್ನಿ, ಮಕ್ಕಳು, ಸಹೋದರ ದಂಪತಿಗಳು ಸಹ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *