Breaking
21 Jun 2026, Sun

ಪಾದಚಾರಿಯ ಮೇಲೆ ಕ್ರೇನ್ ಹರಿದು ಗಂಭೀರ ಗಾಯ: ಚಾಲಕ ಪರಾರಿ

ಉಡುಪಿ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಯ ಮೇಲೆ ಕ್ರೇನ್ ಹರಿದು ಗಂಭೀರವಾಗಿ ಗಾಯಗೊಂಡ ಘಟನೆ ಉಡುಪಿಯ ಪೆರಂಪಳ್ಳಿಯಲ್ಲಿ ನಡೆದಿದೆ.

ಉಡುಪಿ ಪೆರಂಪಳ್ಳಿಯಲ್ಲಿ ಕ್ರೇನ್ ಚಾಲಕ ವಾಹನವನ್ನು ತಿರುಗಿಸಿ, ಎದುರಿನಿಂದ ಬರುತ್ತಿದ್ದ ಕಾರಿಗೆ ದಾರಿ ಮಾಡಿಕೊಡುವ ವೇಳೆ ಈ ಘಟನೆ ಸಂಭವಿಸಿದೆ. ಈ ವೇಳೆ ಪಾದಚಾರಿಯ ಮೇಲೆ ಕ್ರೇನ್ ಹರಿದಿದ್ದು ಕ್ರೇನ್‌ನ ಚಕ್ರದ ಕೆಳಗೆ ಸಿಲುಕಿಕೊಂಡಿದ್ದ ವ್ಯಕ್ತಿಗೆ ಗಂಭೀರ ಗಾಯಗಳಾಗಿದೆ. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ಬಳಿಕ ಕ್ರೇನ್ ಚಾಲಕ ವಾಹನವನ್ನು ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Leave a Reply

Your email address will not be published. Required fields are marked *