Breaking
22 Sep 2026, Tue

ಬದನಾಜೆಯ ಗ್ಯಾರೇಜ್ ಮುಂದೆ ನಿಲ್ಲಿಸಿದ್ದ ಲಾರಿಯಿಂದ ಬ್ಯಾಟರಿ ಕಳವು ಮಾಡಿದ ದುಷ್ಕರ್ಮಿಗಳು

ಬಂಟ್ವಾಳ : ವಿಟ್ಲ- ಪುತ್ತೂರು ರಸ್ತೆಯ ಉದ್ದಕ್ಕೂ ನಿಲ್ಲಿಸಲಾಗಿದ್ದ ಹಲವಾರು ಲಾರಿಗಳಿಂದ ಬ್ಯಾಟರಿಗಳು ಕಳವಾದ ಘಟನೆ ಫೆ.16 ರಂದು ನಡೆದಿದೆ.

ಅಪರಿಚಿತ ದುಷ್ಕರ್ಮಿಗಳು ಬದನಾಜೆಯ ಗ್ಯಾರೇಜ್ ಮುಂದೆ ನಿಲ್ಲಿಸಿದ್ದ ಲಾರಿಯಿಂದ ಬ್ಯಾಟರಿಯನ್ನು ಕದ್ದಿದ್ದಾರೆ. ಅಷ್ಟೇ ಅಲ್ಲದೇ ಕಾಶಿಮಠ ರಸ್ತೆ ಮತ್ತು ಉಕ್ಕುಡದ ಸರ್ವಿಸ್ ಸ್ಟೇಷನ್‌ನಲ್ಲಿ ನಿಲ್ಲಿಸಿದ್ದ ಮೂರು ಲಾರಿಗಳ ಬ್ಯಾಟರಿಗಳು ಕಾಣೆಯಾಗಿವೆ ಎಂದು ಲಾರಿ ಚಾಲಕರು ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ. ಈ ಕುರಿತು ವಿಟ್ಲ ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಆರೋಪಿಗಳು ಬಿಳಿ ಕಾರಿನಲ್ಲಿ ಬಂದು ಕಳ್ಳತನ ಮಾಡಿ ಪರಾರಿಯಾಗುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Leave a Reply

Your email address will not be published. Required fields are marked *