Breaking
1 Apr 2026, Wed

ರಣವೀರ್ ಸಿಂಗ್ ಮತ್ತು ಅವರ ಬೌನ್ಸರ್, ಡ್ರೈವರ್ ಮತ್ತು ಮ್ಯಾನೇಜರ್ ಗಳಿಗೆ ಬಿಷ್ಣೋಯ್ ಗ್ಯಾಂಗ್ ನಿಂದ ಮತ್ತೆ ಜೀವ ಬೆದರಿಕೆ

ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯ್ ಗ್ಯಾಂಗ್ ನಿಂದ ಮತ್ತೆ ಬೆದರಿಕೆ ಬಂದಿದೆ ಎಂದು ಹೇಳಲಾಗುತ್ತಿದೆ.

ಈ ಮೊದಲು ಫೆಬ್ರವರಿ. 10ರಂದು ನಟ ರಣವೀರ್ಗೆ ಬಿಷ್ಣೋಯ್ ಗ್ಯಾಂಗ್ ನವರು ಹೇಳಿಕೊಂಡಿರುವ ಗ್ಯಾಂಗ್ ನಿಂದ 1 ಕೋಟಿ ರೂ ಬೇಡಿಕೆ ಇಟ್ಟು ವಾಟ್ಸಾಪ್ ವಾಯ್ಸ್ ನೋಟ್ ವೊಂದು ಬಂದಿತ್ತು. ಬಳಿಕ ಮತ್ತೆ 2ನೇ ಬಾರಿಗೆ ಮತ್ತೊಂದು ವಾಟ್ಸಾಪ್ ವಾಯ್ಸ್ ನೋಟ್ ಬಂದಿದ್ದು, ಮಾತು ತಪ್ಪಿದರೆ ರಣವೀರ್ ಸಿಂಗ್ ಮಾತ್ರವಲ್ಲ ನಿಮ್ಮ ಇಡೀ ಸಿಬ್ಬಂದಿ ಮತ್ತು ಮ್ಯಾನೇಜರ್ ಗಳನ್ನು ಗುರಿಯಾಗಿಸುವುದಾಗಿ ಗ್ಯಾಂಗ್ ಖಡಕ್ ಎಚ್ಚರಿಕೆ ನೀಡಿದೆ.

ನಿರ್ಮಾಪಕ-ನಿರ್ದೇಶಕ ರೋಹಿತ್ ಶೆಟ್ಟಿ ಅವರ ನಿವಾಸದ ಗುಂಡಿನ ದಾಳಿ ನಡೆದ ಘಟನೆಯ ಬೆನ್ನಲ್ಲೇ ಇದೀಗ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ಬೆದರಿಕೆ ಕರೆಯೊಂದು ಬಂದಿರುವುದು ಬಾಲಿವುಡ್ ಚಿತ್ರರಂಗವನ್ನು ತೀವ್ರ ಆತಂಕಕ್ಕೆ ಈಡು ಮಾಡಿದೆ.

ಸದ್ಯ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ದಂಪತಿ ವಾಸಿಸುವ ಅಪಾರ್ಟ್ಮೆಂಟ್ ಗೆ ಸಶಸ್ತ್ರ ಗಾರ್ಡ್ ಗಳನ್ನು ನಿಯೋಜಿಸಲಾಗಿದ್ದು ಪ್ರಕರಣದ ನಿಜವಾದ ಆರೋಪಿಗಳಿಗಾಗಿ ಮುಂಬೈ ಪೊಲೀಸರು ತನಿಖೆ ಚುರುಕುಗೊಳಸಿದ್ದಾರೆ.

ರಣವೀರ್ ಸಿಂಗ್ ಅವರ ಬಹುನಿರೀಕ್ಷಿತ ಚಿತ್ರ ‘ಧುರಂಧರ್: ದಿ ರಿವೇಂಜ್’ ಮಾರ್ಚ್ 19 ರಂದು ಬಿಡುಗಡೆಯಾಗಲಿದ್ದು, ಈ ಸಮಯದಲ್ಲಿ ಈ ಬೆದರಿಕೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

ಇದಲ್ಲದೆ, ಮನೆಯ ಸುತ್ತಮುತ್ತ ಖಾಸಗಿ ಭದ್ರತಾ ಸಿಬ್ಬಂದಿಯನ್ನೂ ದಂಪತಿಗಳು ನಿಯೋಜಿಸಿದ್ದು, ಶಸ್ತ್ರಾಸ್ತ್ರ ಹಿಡಿದ ಭದ್ರತಾ ಸಿಬ್ಬಂದಿ ಓಡಾಟ ಆರಂಭಿಸಿದ್ದಾರೆ. ಇದರಿಂದಾಗಿ ನೆರೆಹೊರೆಯವರಿಗೆ ಆತಂಕ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

ಪೊಲೀಸರ ಮೂಲಗಳ ಪ್ರಕಾರ, ಈ ಬೆದರಿಕೆ ಕರೆಗಳ ಹಿಂದೆ ಬಿಷ್ಣೋಯ್ ಗ್ಯಾಂಗ್ ನ ಪ್ರಮುಖ ಶೂಟರ್ ಹ್ಯಾರಿ ಬಾಕ್ಸರ್ ಎಂಬಾತನ ಕೈವಾಡವಿದೆ ಅಂತ ಹೇಳಲಾಗುತ್ತಿದೆ. ಈತ ಕೆನಡಾ ಅಥವಾ ಯುರೋಪ್ ನಲ್ಲಿ ಕುಳಿತು ಭಾರತದ ಸೆಲೆಬ್ರಿಟಿಗಳಿಗೆ ಇಂಟರ್ನೆಟ್ ಕರೆಗಳ ಮೂಲಕ ಬೆದರಿಕೆ ಹಾಕುತ್ತಿದ್ದಾನೆ ಎನ್ನಲಾಗಿದೆ. ಈ ಹಿಂದೆ ಗಾಯಕ ಎಪಿ ಧಿಲ್ಲೋನ್ ಅವರ ಮನೆಯ ಮೇಲೆ ನಡೆದ ಗುಂಡಿನ ದಾಳಿಯಲ್ಲೂ ಈತನ ಹೆಸರು ಕೇಳಿಬಂದಿತ್ತು.

ಇಂತಹ ವಿಚಾರಗಳಲ್ಲಿ ಸಾಮಾನ್ಯವಾಗಿ ನಟರನ್ನು ನೇರವಾಗಿ ಟಾರ್ಗೆಟ್ ಮಾಡುವ ಕೆಲವು ಗ್ಯಾಂಗ್ ಗಳು ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ, ರಣವೀರ್ ಅವರ ಬೌನ್ಸರ್, ಡ್ರೈವರ್‌ ಗಳು ಮತ್ತು ವೈಯಕ್ತಿಕ ಮ್ಯಾನೇಜರ್ ಗಳ ವಿವರಗಳನ್ನು ತಾನು ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದಾನೆ. “ನೀನು ಪೊಲೀಸರ ಹತ್ತಿರ ಹೋಗು ಎಂದು ಬೇರೆಯವರಿಗೆ ಬುದ್ಧಿ ಹೇಳುತ್ತೀಯಾ? ಈಗ ನಿನ್ನ ಮ್ಯಾನೇಜರ್‌ ಗಳ ಕುಟುಂಬಕ್ಕೆ ಏನಾಗುತ್ತದೆ ನೋಡು” ಎಂದು ಬೆದರಿಸಿರುವುದು ರಣವೀರ್ ಅವರ ಆಪ್ತ ವಲಯದಲ್ಲಿ ಆತಂಕ ಮೂಡಿಸಿದೆ.

ಇತ್ತ ದಾದರ್ ಪೊಲೀಸರು ಮತ್ತು ಮುಂಬೈ ಕ್ರೈಂ ಬ್ರಾಂಚ್ ರಣವೀರ್ ಅವರ ನಿವಾಸದ ಸುತ್ತಮುತ್ತಲ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಅಲ್ಲದೆ ರಣವೀರ್ ಮತ್ತು ದೀಪಿಕಾ ಅವರಿಗೆ ‘ವೈ+’ ಕೆಟಗರಿ ಭದ್ರತೆ ನೀಡುವ ಬಗ್ಗೆಯೂ ಚರ್ಚೆಗಳು ಕೂಡ ನಡೆಯುತ್ತಿವೆ.

Leave a Reply

Your email address will not be published. Required fields are marked *