Breaking
1 Apr 2026, Wed

ಅಮೇರಿಕದಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ನಾಪತ್ತೆ,ಮುಂದುವರಿದ ಹುಡುಕಾಟ

ಅಮೇರಿಕ: ಕರ್ನಾಟಕ ಮೂಲದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ (22) ಅಮೇರಿಕದಲ್ಲಿ ಫೆ. 9 ರಂದು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಫೆಬ್ರವರಿ.14 ರಂದು ಸಾಕೇತ್ ಅವರು ನಾಪತ್ತೆಯಾಗಿರುವ ಬಗ್ಗೆ ಭಾರತೀಯ ರಾಯಭಾರ ಕಚೇರಿ ಕುರಿತು ಟ್ವೀಟ್ ಮಾಡಿದ್ದು ಅವರನ್ನು ಕೊನೆಯದಾಗಿ ಬರ್ಕ್ಲಿ ಬೆಟ್ಟಗಳ ಲೇಕ್ ಅಂಜಾ ಬಳಿ ನೋಡಲಾಗಿತ್ತು. ಸದ್ಯ ಅವರ ಕುಟುಂಬಸ್ಥರು ಅವರನ್ನು ಹುಡುಕಲು ಸಂಬಂಧಪಟ್ಟ ಇಲ್ಲಿನ ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮಾಹಿತಿ ನೀಡಿದೆ.

ಇತ್ತ ಸಾಕೇತ್ ನಾಪತ್ತೆಯಾಗಿರುವ ಬಗ್ಗೆ ಅವರ ರೂಮ್ಮೇಟ್ ಬನೀತ್ ಸಿಂಗ್ ಎಂಬವರು ಪತ್ತೆಹಚ್ಚಲು ಸಹಾಯ ಕೋರಿ ಲಿಂಕ್ಡ್ಇನ್ನಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ.

ನಾಪತ್ತೆಯಾಗಿರುವ ಸಾಕೇತ್ ಅವರು 2025 ರಲ್ಲಿ ಐಐಟಿ-ಮದ್ರಾಸ್ನಿಂದ ಕೆಮಿಕಲ್ ಎಂಜಿನಿಯರಿಂಗ್ನಲ್ಲಿ ಬಿಟೆಕ್ ಪದವಿ ಪಡೆದಿದ್ದಾರೆ. ಪ್ರಸ್ತುತ ಅವರು ನ್ಯೂಯಾರ್ಕ್ ನ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದದಿಂದ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದರು.

Leave a Reply

Your email address will not be published. Required fields are marked *