ಕೊಲಂಬೋ: ಶ್ರೀಲಂಕಾದ ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಫೆ.15 ರಂದು ನಡೆಯುವ ರಣರೋಚಕ ಕ್ರಿಕೆಟ್ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ.

ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಕ್ರಿಕೆಟ್ ಪಂದ್ಯಾಟವನ್ನು ನಿಗದಿ ಮಾಡಲಾಗಿದೆ. ಇತ್ತ ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಕಡಿಮೆ ಒತ್ತಡದ ರೂಪುಗೊಳ್ಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಮಳೆ ಬರುವ ಮನ್ಸೂಚನೆ ಕೊಟ್ಟಿದೆ. ಈ ಮೊದಲು ಬಾಂಗ್ಲಾದೇಶದ ಪಂದ್ಯಗಳನ್ನು ಭಾರತದಿಂದ ಸ್ಥಳಾಂತರ ಮಾಡದ್ದಕ್ಕೆ ಪಾಕಿಸ್ತಾನ ಆರಂಭದಲ್ಲಿ ಟೀಂ ಇಂಡಿಯಾ ವಿರುದ್ಧ ಆಡುವುದಿಲ್ಲ ಎಂದು ಹೇಳಿತ್ತು. ನಂತರ ಐಸಿಸಿ ನೀಡಿದ ಎಚ್ಚರಿಕೆಯ ಬಳಿಕ ಪಂದ್ಯ ಆಡಲು ಒಪ್ಪಿಗೆ ನೀಡಿತ್ತು.

ಅಕ್ಯೂವೆದರ್ ಪ್ರಕಾರ, ಪಂದ್ಯ ಪ್ರಾರಂಭವಾಗುವ ಎರಡು ಗಂಟೆಗಳ ಮೊದಲು ಸಂಜೆ 5 ಗಂಟೆಯ ಸುಮಾರಿಗೆ ಮಳೆಯಾಗುವ ಸಾಧ್ಯತೆಯಿದೆ. ಹೀಗಿದ್ದರೂ ಪಂದ್ಯ ನಡೆಯುವ ಮಳೆ ಬರುವ ಸಾಧ್ಯತೆ ಕಡಿಮೆ ಎಂದು ಹೇಳಿದೆ. ಹೀಗಿದ್ದರೂ ಪಂದ್ಯ ನಡೆಯುವ ಮಳೆ ಬರುವ ಸಾಧ್ಯತೆ ಕಡಿಮೆ ಎಂದು ಹೇಳಿದೆ. ಇದರ ನಡುವೆ ಐಸಿಸಿ ಕೂಡ ಗಮನ ಹರಿಸಿದ್ದು ತಡವಾದರೂ ಪಂದ್ಯ ನಡೆಸುವ ಇರಾದೆಯಲ್ಲಿದೆ.

ಭಾರತ ಮತ್ತು ಪಾಕ್ ಲೀಗ್ ನಲ್ಲಿ ಆಡಿರುವ ಎರಡೂ ಪಂದ್ಯವನ್ನು ಗೆದ್ದಿದೆ ಆದರೂ ರನ್ ರೇಟ್ಆಧಾರದ ಮೇಲೆ ಭಾರತ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಭಾರತ ತಂಡ ನೆಟ್ ನಲ್ಲಿ ಅಭ್ಯಸ ನಡುಸುತ್ತಿದ್ದು ಪಾಕ್ ಗೆ ಮತ್ತೆ ಸೋಲಿನ ರುಚಿ ತೋರಿಸಲು ಹಾತೊರೆಯುತ್ತಿದೆ. ಒಟ್ಟಾರೆ ವಿಶ್ವಕಪ್ ಟಿ.20 ಕ್ರಿಕೆಟ್ ನ ರೋಚಕ ಪಂದ್ಯಕ್ಕೆ ಸಕಲ ಸಿದ್ದತೆಗಳು ನಡೆದಿದ್ದು ಇಡೀ ಕ್ರೀಡಾಂಗಣದ ಆಸನದ ಟಿಕಿಟ್ ಗಳು ಈಗಾಗಲೆ ದಾಖಲೆಯಂಬಂತೆ ಮಾರಾಟವಾಗಿದೆ.







