Breaking
11 Feb 2026, Wed

ರುದ್ರ ಶಿವ ಹಾಗೂ ಸತ್ಯ ಹರಿಶ್ಚಂದ್ರ ಮೂರ್ತಿಗಳ ನೂತನ ಕೊಠಡಿ ಹಾಗೂ ಎಪಿಎಂಸಿ ಯ ನೂತನ ಮೀನು ಮಾರುಕಟ್ಟೆ ಉದ್ಘಾಟನೆ

ಬಂಟ್ವಾಳ: ಸಂಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿಂದೂ ರುದ್ರ ಭೂಮಿಯಲ್ಲಿ ಪಂಚಾಯತ್ 15ನೇ ಹಣಕಾಸು ನಿಧಿಯಲ್ಲಿ ನಿರ್ಮಾಣಗೊಂಡಿರುವ ಲಯಕರ್ತ, ಸ್ಮಶಾನವಾಸಿ ರುದ್ರ ಶಿವ ಹಾಗೂ ಸತ್ಯ ಹರಿಶ್ಚಂದ್ರ ಮೂರ್ತಿಯ ಮತ್ತು ನೂತನ ಕೊಠಡಿಯ ಉದ್ಘಾಟನೆ ಹಾಗೂ ಎಪಿಎಂಸಿ ಹಾಗೂ ಪಂಚಾಯತ್ ನಿಧಿಯಲ್ಲಿ ಸಿದ್ಧಕಟ್ಟೆ ಮಾರುಕಟ್ಟೆಯಲ್ಲಿ ಸ್ಥಾಪನೆಗೊಂಡಿರುವ ನೂತನ ಸುಸಜ್ಜಿತವಾದ ಮೀನು ಮಾರುಕಟ್ಟೆಯನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಯಕ್ ಅವರು ಇಂದು (ಫೆ. 11) ಉದ್ಘಾಟಿಸಿದರು.

ಈ ಸಂಧರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ರಾಜೀವಿ, ಉಪಾಧ್ಯಕ್ಷರಾದ ಸುರೇಶ್ ಕುಲಾಲ್, ಸದಸ್ಯರುಗಳಾದ ಸತೀಶ್ ಪೂಜಾರಿ, ಸಂದೇಶ ಶೆಟ್ಟಿ, ಉದಯ ಪೂಜಾರಿ, ಸುನೀಲ್ ಶೆಟ್ಟಿಗಾರ್, ದೇವಪ್ಪ ಕರ್ಕೇರ, ದಾಮೋದರ ಪೂಜಾರಿ, ಬೆನಾಡಿಕ್ಟ ಡಿಕೋಸ್ತ, ಶಕುಂತಲಾ, ಶಾಂತ, ವಿಮಲಾ ಮೋಹನ್, ಪ್ರೇಮ, ವಿದ್ಯಾ, ಹೇಮಲತಾ ಹಾಗೂ ಮಾಜಿ ತಾಲೂಕು ಸದಸ್ಯರಾದ ರತ್ನ ಕುಮಾರ್ ಚೌಟ, ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರಭಾಕರ ಪ್ರಭು, ಸಿಎ ಬ್ಯಾಂಕ್ ನಿರ್ದೇಶಕರಾದ ವಿಶ್ವನಾಥ್ ಶೆಟ್ಟಿಗಾರ್, ಶಿವ ಗೌಡ, ವೃತ್ತಿಪರ ನಿರ್ದೇಶಕರಾದ ನವೀನ್ ಹೆಗ್ಡೆ, ಸ್ಥಳೀಯರಾದ ದೀಪಕ್ ಶೆಟ್ಟಿಗಾರ್, ಉದಯ ಶೆಟ್ಟಿಗಾರ್, ಪ್ರವೀಣ್ ಹೆಗ್ಡೆ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪದ್ಮಾ, ಕಾರ್ಯದರ್ಶಿ ಶ್ರೀಮತಿ ರೋಹಿಣಿ, ಪಂಚಾಯತ್ ಸಿಬ್ಬಂದಿ ಮತ್ತು NRLM ನ ಸದಸ್ಯರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರಜ್ವಲ್ ಎ ಸಿದ್ಧಕಟ್ಟೆ ಸ್ವಾಗತಿಸಿ ನಿರೂಪಿಸಿದರು.

Leave a Reply

Your email address will not be published. Required fields are marked *