Breaking
21 Jun 2026, Sun

ಮಾದಕ ವಸ್ತು ಮಾರಾಟ ಯತ್ನ: ಉಪ್ಪಿನಂಗಡಿಯಲ್ಲಿ ಆರೋಪಿ ಬಂಧನ

ಪುತ್ತೂರು: ಎಂಡಿಎಂಎ ಮಾದಕ ವಸ್ತುವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಯಾಹ್ಯಾ ಕೊಕ್ಕಡ (48) ಎಂದು ಗುರುತಿಸಲಾಗಿದೆ.

ಫೆ. 10ರಂದು ಉಪ್ಪಿನಂಗಡಿ ಗ್ರಾಮದ ಪಂಜಾಲ ಪ್ರದೇಶದಲ್ಲಿ ಪೊಲೀಸರು ಕರ್ತವ್ಯದಲ್ಲಿದ್ದ ವೇಳೆ ಒಬ್ಬ ವ್ಯಕ್ತಿ ಅನುಮಾನಾಸ್ಪದವಾಗಿ ನಿಂತಿರುವುದನ್ನು ಪೊಲೀಸರು ಗಮನಿಸಿದ್ದಾರೆ. ತಕ್ಷಣ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಮಾರಾಟ ಮಾಡುವ ಉದ್ದೇಶದಿಂದ ಎಂಡಿಎಂಎ ಹೊಂದಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಲಾಗಿದೆ.

ಆರೋಪಿಯಿಂದ 2 .16 ಗ್ರಾಂ ಎಂಡಿಎಂಎ ,ಐಫೋನ್ , ಸ್ಯಾಮ್‌ಸಂಗ್ ಕೀಪ್ಯಾಡ್ ಮೊಬೈಲ್ ಫೋನ್ ವಶಕ್ಕೆ ಪಡೆದುಕೊಳ್ಳಲಾಗಿದೆ.

ಈ ಕುರಿತು ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *