Breaking
1 Apr 2026, Wed

ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್ ಹೃದಯಾಘಾತದಿಂದ ನಿಧನ

ಬಂಟ್ವಾಳ: ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್ (65) ಅವರು ಹೃದಯಾಘಾತದಿಂದ ಫೆ. 6 ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಪುತ್ತೂರು ಬೆಂದ್ರುತೀರ್ಥ ನಿವಾಸಿಯಾಗಿದ್ದ ಇವರು ಪ್ರಸಕ್ತ ರಾಯಿ ಸಮೀಪದ ಮಾಬೆಟ್ಟು ಎಂಬಲ್ಲಿ ವಾಸವಾಗಿದ್ದರು. ಇವರು ಸಹಾಯಕ ಕೃಷಿ ಅಧಿಕಾರಿಯಾಗಿ ಉಡುಪಿ, ಬ್ರಹ್ಮಾವರ, ಬಂಟ್ವಾಳ ಕೃಷಿ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು. ರಾಯಿ ಪರಿಸರದಲ್ಲಿ ಪ್ರಗತಿಪರ ಕೃಷಿಕರಾಗಿದ್ದ ಇವರು ಕೃಷಿ ಸಾಮಾಗ್ರಿ ಮಾರಾಟ ಕೇಂದ್ರವನ್ನೂ ಮುನ್ನಡೆಸುತ್ತಿದ್ದರು.

ಫೆ. 6 ರಂದು ರಾತ್ರಿ ಸ್ಥಳೀಯ ಕೈತ್ರೋಡಿ ಕ್ವಾರ್ಟರ್ಸ್‌ನಲ್ಲಿ ನಡೆದ ಕಟೀಲು ಮೇಳದ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ಹಿಂತಿರುಗಿದ ಬಳಿಕ ತಡರಾತ್ರಿ ಹೃದಯಾಘಾತದಿಂದ ಸಂಭವಿಸಿ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಮೃತರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಫೆ. 7 ರಂದು ಬೆಳಿಗ್ಗೆ 11 ಗಂಟೆಗೆ ರಾಯಿ ಮಾಬೆಟ್ಟು ಸ್ವಗೃಹ ಬಳಿ ನೆರವೇರಿತು ಎಂದು ಮೃತರ ಕುಟುಂಬದ ಮೂಲಗಳು ತಿಳಿಸಿದೆ.

Leave a Reply

Your email address will not be published. Required fields are marked *