Breaking
11 Feb 2026, Wed

ಕೈತ್ರೋಡಿ ಕ್ವಾರ್ಟರ್ಸ್‌ನಲ್ಲಿ 33ನೇ ವರ್ಷದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ

ಬಂಟ್ವಾಳ: ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟರ್ಸ್‌ನ ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ವತಿಯಿಂದ ಫೆ. 6 ರಂದು ಕಟೀಲು ಮೇಳದಿಂದ 33ನೇ ವರ್ಷದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಿತು.

ಈ ಸಂದರ್ಭ ‘ಕಟೀಲು ಶ್ರೀ ದುರ್ಗಾಪರಮೇಶ್ವರಿ ಮಕ್ಕಳ ಮೇಳ ಪ್ರಶಸ್ತಿ’ ಪುರಸ್ಕೃತ ಹಿರಿಯ ಕಲಾವಿದ 3ನೇ ಮೇಳದ ಮೆನೇಜರ್ ಶ್ರೀಧರ ಪಂಜಾಜೆ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಸಮಿತಿ ಸದಸ್ಯ ಮೋಹನ್ ಕೆ. ಶ್ರೀಯಾನ್ ಪ್ರಾಸ್ತಾವಿಕ ಮಾತನಾಡಿ, ‘ ಇಲ್ಲಿನ ಸಮಿತಿ ಮತ್ತು ದಾನಿಗಳ ನೆರವಿನಲ್ಲಿ ಸ್ಥಳೀಯ ಮಕ್ಕಳಿಗೆ ಯಕ್ಷಗಾನ ಮತ್ತು ಭರತನಾಟ್ಯ ಸೇರಿದಂತೆ ವಿವಿಧ ಶೈಕ್ಷಣಿಕ ಮಾರ್ಗದರ್ಶನ ನೀಡಲು ರೂ 25 ಲಕ್ಷ ವೆಚ್ಚದಲ್ಲಿ ‘ಭ್ರಾಮರಿ’ ಸಾರ್ವಜನಿಕ ರಂಗಮಂದಿರ ನಿರ್ಮಾಣಗೊಳ್ಳುತ್ತಿದೆ’ ಎಂದರು.

ಇದೇ ವೇಳೆ ಹಿರಿಯ ಸದಸ್ಯ ರಾಮ ನಾಯ್ಕ್ ಬೈರಾಡಿ ಇವರನ್ನು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಸಮಿತಿ ಪದಾಧಿಕಾರಿಗಳಾದ ಹರೀಶ ಶೆಟ್ಟಿ ಕೈತ್ರೋಡಿ, ಆನಂದ ಟೈಲರ್, ಆನಂದ ಪೂಜಾರಿ ಅಂತರ, ದಿನಕರ ಭಟ್, ಶಾಂತ ಕುಮಾರ್ ಶೆಟ್ಟಿ, ರಮೇಶ ಆಚಾರ್ಯ, ಸೂರಜ್ ಚಿಂಗಲಚ್ಚಿಲ್, ಹರೀಶ ಪೂಜಾರಿ, ವಸಂತ ಪೂಜಾರಿ, ವಿನೋದ್ ರಾಜ್ ಕೈತ್ರೋಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *