Breaking
21 Sep 2026, Mon

ಉಜಿರೆಯಲ್ಲಿ ಕುಳಿತ ಭಂಗಿಯಲ್ಲೇ ಮೃತಪಟ್ಟ ಸ್ಥಿತಿಯಲ್ಲಿ ವ್ಯಕ್ತಿ ಪತ್ತೆ

ಬೆಳ್ತಂಗಡಿ: ವ್ಯಕ್ತಿಯೊಬ್ಬರು ಕುಳಿತ ಭಂಗಿಯಲ್ಲೇ ಮೃತಪಟ್ಟ ಸ್ಥಿತಿಯಲ್ಲೇ ಪತ್ತೆಯಾದ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಚಾರ್ಮಾಡಿ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡ ಬ್ಯಾಂಕ್ ಕಟ್ಟಡದ ಬದಿಯಲ್ಲಿ ಫೆ.7 ರಂದು ಕಂಡು ಬಂದಿದೆ.

ಮೃತರನ್ನು ನಡ ಗ್ರಾಮದ ಸುರ್ಯ ಬರಮೇಲು ನಿವಾಸಿ ದೇವರಾಜ್(50) ಎಂದು ಗುರುತಿಸಲಾಗಿದೆ.

ಬ್ಯಾಂಕ್ ಸಿಬ್ಬಂದಿ ಕಟ್ಟಡದ ಬದಿಯಲ್ಲಿ ಹೋಗುವಾಗ ಕುಳಿತ ಮೃತಪಟ್ಟ ಸ್ಥಿತಿಯಲ್ಲಿ ದೇವರಾಜ್ ಅವರು ಕಂಡು ಬಂದಿದ್ದಾರೆ ಎಂದು ತಿಳಿದು ಬಂದಿದೆ.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *