ಮಂಗಳೂರು : ನಂತೂರು ಬಳಿ ನಡೆದ ಭೀಕರ ಬಸ್ ಅಪಘಾತಕ್ಕೆ ಸಂಬಂಧಿಸಿದಂತೆ ದೀಪ್ತಿ ಅವರ ಮೃತದೇಹವನ್ನು ಖಾಸಗಿ ಆಸ್ಪತ್ರೆಯಿಂದ ಕದ್ರಿ ಪೊಲೀಸ್ ಠಾಣೆಗೆ ತಂದು ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಪೊಲೀಸರು ಹಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪ್ರತಿಭಟನೆಯಲ್ಲಿ ಸುಮಾರು 50 ಜನರು ಆಂಬ್ಯುಲೆನ್ಸ್‌ನೊಂದಿಗೆ ದ್ವಿಚಕ್ರ ವಾಹನಗಳು ಮತ್ತು ಕಾರುಗಳಲ್ಲಿ ಕದ್ರಿ ಪೊಲೀಸ್ ಠಾಣೆ ಬಳಿ ಬಂದು ಕಾನೂನು ಬಾಹಿರವಾಗಿ ಸಭೆ ಸೇರಿ ಪ್ರತಿಭಟನೆ ನಡೆಸಿದ ಕಾರಣಕ್ಕೆ ಬಲ್ಲಾಳ್‌ಬಾಗ್ ಬಳಿಯ ವಿವೇಕನಗರದ ಅಮಿತ್, ಕೀರ್ತನ್, ನವೀತ್, ಭರತ್‌ರಾಜ್, ಪವನ್ ಮತ್ತು ಲೋಕೇಶ್; ಬಲ್ಲಾಲ್‌ಬಾಗ್‌ನ ಮನ್ವೀತ್, ಕಂಕನಾಡಿಯ ಅನಿಲ್ ಕುಮಾರ್, ಬಲ್ಲಾಲ್‌ಬಾಗ್‌ನ ಪ್ರೇಮನಾಥ್, ವಿರುದ್ದ ಪ್ರಕರಣ ದಾಖಲಾಗಿದೆ.

ಈ ವೇಳೆ ಪ್ರತಿಭಟನೆ ಮಾಡುವುದು ಸರಿಯಲ್ಲವೆಂದು ಪೊಲೀಸ್ ಅಧಿಕಾರಿಗಳು ಹೇಳಿದರೂ ಕೂಡ ನಿಲ್ಲಿಸದೆ ಪ್ರತಿಭಟನೆ ನಡೆಸಿ ಸಾರ್ವಜನಿಕ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ ಎಂದು ಆರೋಪಿಸಲಾಗಿದೆ. ಈ ಆರೋಪಗಳ ಆಧಾರದ ಮೇಲೆ, ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.








